ಡಿಕ್ಷನರಿ ತಿದ್ದಲು ಹೊರಟ ನಾದಬ್ರಹ್ಮ | ಶೂದ್ರ ಪದ ಕಿತ್ತು ಹಾಕ್ತಾರಂತೆ ಹಂಸಲೇಖ

ಚಿತ್ರದುರ್ಗದಲ್ಲಿ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಎಲ್ಲಾ ನಿಘಂಟುಗಳಿಂದ ಶೂದ್ರ ತೆಗೆಯಬೇಕು. ಶೂದ್ರ ಹೋಗಿ ಶುದ್ಧವಾಗಬೇಕು ಎಂದು ಹೇಳಿದ್ದಾರೆ.

ನಾವೆಲ್ಲರೂ ಶುದ್ಧರು, ಶೂದ್ರರಲ್ಲ.ಶೂದ್ರ ಪದವನ್ನು ಎಲ್ಲ ನಿಘಂಟು ಗಳಿಂದ ನಿವಾರಿಸಿ ಎಂದು ನಗರದಲ್ಲಿಂದು ತ.ರಾ.ಸು ರಂಗಮಂದಿರದಲ್ಲಿ ಮಾನವ ಬಂಧತ್ವ ವೇದಿಕೆ ಆಯೋಜಿಸಿದ್ದ ಬಂಧುತ್ವ ಅಧಿವೇಶನ ಸಮಾರೋಪ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. 

ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ. ಶೂದ್ರ ಮತ್ತು ಶುದ್ಧ ಪದಕ್ಕೆ ಸಂಬಂಧಿಸಿದಂತೆ ‘ರಾ ಒತ್ತು ರದ್ದಾಯಿತು..’ ಎಂಬ ಹಾಡು ಬರೆಯುವ ಪ್ರಯತ್ನದಲ್ಲಿದ್ದೇನೆ. ಶೂದ್ರ ಹೋಗಿ ಶುದ್ಧವಾಗಬೇಕೆಂಬುದರ ಬಗ್ಗೆ ಎಪ್ರಿಲ್ 14 ಅಂಬೇಡ್ಕರ್ ಜಯಂತಿ ವೇಳೆ ಹಾಡು ಬರೆದು ಹಾಕುತ್ತೇನೆಂದರು. 

ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಇತ್ತೀಚೆಗೆ ಶೂದ್ರ ಪದವನ್ನು ಧಾರಾಳವಾಗಿ ಬಳಸಿದರು. ಹಾಳಾಗಿ ಹೋಗಿದ್ದ ಈ ಶಬ್ದ ಏಕೆ ಹೊರಗೆ ಬಂದಿತು ಎಂಬ ಬೇಸರ ಮೂಡಿತು. ಬೇರೆಯವರು ನಮ್ಮನ್ನು ಶೂದ್ರರು ಎಂದು ಸಂಬೋಧಿಸಿದರೆ ಅದಕ್ಕೆ ಹೊಣೆಗಾರರು ನಾವಲ್ಲ’ ಎಂದು ಪ್ರತಿಪಾದಿಸಿದರು.

Leave A Reply

Your email address will not be published.