16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿ ಸಂಭೋಗ ಮಾಡುವಾಗ ‘ಕಾಂಡೋಮ್’ ಬಳಸಿದ್ದ ಎಂದು ಜಾಮೀನು ನೀಡಿದ ಕೋರ್ಟ್!

ಅಪ್ರಾಪ್ತ ಯುವತಿಗೆ ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನಿಗೆ ಕಾಂಡೋಮ್ ಬಳಸಿದ್ದಾನೆ ಎಂದು ಹಾಗೂ ಕೃತ್ಯದ ಪರಿಣಾಮ ಆಕೆಗೆ ಅರಿವಿತ್ತು ಎಂಬ ಅಂಶಗಳನ್ನು ಗುರುತಿಸಿ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

2019ರ ಸೆಪ್ಟೆಂಬರ್ 9 ರಂದು ಕೊಲ್ಲಾಪುರ ಪೊಲೀಸರು ಬಂಧನದಲ್ಲಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಏಕ-ನ್ಯಾಯಾಧೀಶ ಪೀಠದ ಸಿ.ವಿ.ಭದಂಗ್ ವಿಚಾರಣೆ ನಡೆಸಿ, ಜಾಮೀನು ನೀಡಲು ಮುಂದಾಗಿದ್ದಾರೆ. ಆರೋಪಿಯು 2 ವರ್ಷಕ್ಕಿಂತ ಹೆಚ್ಚು ಕಾಲ ಪೊಲೀಸ್ ಬಂಧನದಲ್ಲಿದ್ದಾನೆ ಎಂಬುದನ್ನು ಪರಿಗಣಿಸಿ 25,000 ರೂ. ಶ್ಯೂರಿಟಿಯೊಂದಿಗೆ ಜಾಮೀನು ನೀಡಲಾಗಿದೆ.

16 ವರ್ಷದ ಅಪ್ರಾಪ್ತೆ ಮತ್ತು ಆಕೆಯ ಒಪ್ಪಿಗೆ ಇದ್ದು ಈ ಸಂಬಂಧ ಬೆಳೆಸಿದ್ದು ಎಂದು ಗಮನದಲ್ಲಿಟ್ಟು ಈ ಜಾಮೀನು ಮಂಜೂರಾಗಿದೆ. ಇದರಲ್ಲಿ ಯಾವುದೇ ಬಲವಂತದ ಅಂಶಗಳಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ವೈದ್ಯಕೀಯ ವರದಿಯ 15 (F)ರ ಪ್ರಕಾರ ಅರ್ಜಿದಾರರು ಸಂಭೋಗದ ವೇಳೆ ರಕ್ಷಣೆ (ಕಾಂಡೋಮ್) ಸಹ ಬಳಸಿದ್ದಾರೆಂಬುದನ್ನು ಎಂಬ ಅಂಶಗಳನ್ನು ನ್ಯಾಯಾಲಯ ಗುರುತಿಸಿದೆ.

ಸಂತ್ರಸ್ತೆ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಆರ್.ಕಪಾಡ್ನಿಸ್ ಪ್ರಕಾರ, ಸಂತ್ರಸ್ತೆಯ ತಂದೆ ಎಫ್‌ಐಆರ್ ದಾಖಲಿಸಿದಾಗ ಆಕೆಗೆ 16 ವರ್ಷ 6 ತಿಂಗಳ ವಯಸ್ಸು. ಆರೋಪಿಯು ಆಕೆಗೆ ಮುಂಚೆಯೇ ಪರಿಚಯವಿದ್ದರಿಂದ 2019ರ ಮೇ ತಿಂಗಳಲ್ಲಿ ಹುಡುಗಿಯನ್ನು ತನ್ನ ಮನೆಯ ಹಿಂದೆ ಕರೆದೊಯ್ದಿದ್ದಾನೆ. ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ವಾದಿಸಿದ್ದರು.

ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಈ ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.