SSLC ಪರೀಕ್ಷೆ ಭಯ-ಬಾಯ್ ಫ್ರೆಂಡ್ ಜೊತೆ ಓಡಿ ಹೋದ ವಿದ್ಯಾರ್ಥಿನಿ!!!

ಪರೀಕ್ಷೆ ಭಯ ಕಾಡಿದ ವಿದ್ಯಾರ್ಥಿನಿಯೊಬ್ಬಳು ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳು ಸಮಾಜ ವಿಜ್ಞಾನ ಪರೀಕ್ಷೆಗೆ ಹೆದರಿ ಬುಧವಾರ ತನ್ನ ಪ್ರೇಮಿಯೊಂದಿಗೆ ಬೆಂಗಳೂರಿಗೆ ಓಡಿ ಹೋಗಿದ್ದು ಈ ಘಟನೆ ಬುಧವಾರ ನಡೆದಿದೆ.

ಅನಂತರ ಬಾಲಕಿಗೆ ಏಕೋ ಏನೋ ತನ್ನ ಬಾಯ್ ಫ್ರೆಂಡ್ ಮೇಲೆ ಅನುಮಾನ ಬಂದಿದ್ದು ಬೇರೆಯವರಿಗೆ ತನ್ನನ್ನು ಮಾರುವ ಸಂಚು ಮಾಡಿದ್ದಾನೆ ಎಂದು ಶಂಕಿಸಿ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರ ಸಹಾಯವನ್ನು ಕೋರಿದ್ದಾಳೆ. ತಡರಾತ್ರಿ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಚೆನ್ನೈಗೆ ಹೋಗುವ ರೈಲಿನಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈಲ್ವೇ ಮೂಲಗಳ ಪ್ರಕಾರ, 17 ವರ್ಷದ ಬಾಲಕ ಅದೇ ಖಾಸಗಿ ಶಾಲೆಯ 11 ನೇ ತರಗತಿ ವಿದ್ಯಾರ್ಥಿ. “ಹುಡುಗಿ ತನ್ನ ಪರೀಕ್ಷೆಯ ಬಗ್ಗೆ ಭಯಗೊಂಡಿದ್ದಳು. ಅದರಿಂದ ತಪ್ಪಿಸಿಕೊಳ್ಳಲು ಬಯಸಿದ್ದಳು ಎನ್ನಲಾಗಿದ್ದು, ಹಾಗಾಗಿ ಇಬ್ಬರೂ ಸೇರಿ ಪ್ಲ್ಯಾನ್ ಮಾಡಿ ಉತ್ತಮ ಜೀವನಕ್ಕಾಗಿ ಬೆಂಗಳೂರಿಗೆ ತೆರಳಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದ ನಂತರ, ಯಾರೋ ಚೆನ್ನೈನಲ್ಲಿ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹುಡುಗಿಗೆ ಬಾಯ್ ಫ್ರೆಂಡ್ ಹೇಳಿದ್ದು ಆತನ ನಡವಳಿಕೆಯಲ್ಲಿನ ಬದಲಾವಣೆಯಿಂದ ಯುವತಿ ಆತಂಕಗೊಂಡಿದ್ದಳು ಹಾಗೂ ರೈಲಿನಲ್ಲಿ ಆರ್‌ಪಿಎಫ್‌ನ ಬೆಂಗಾವಲು ಪಡೆ ರೈಲಿನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಈಕೆ ಪೋಲೀಸ್ ಅನ್ನು ಎಚ್ಚರಿಸಿದಳು ಎನ್ನಲಾಗಿದೆ.

ನಂತರ ಇಬ್ಬರೂ ಅಪ್ರಾಪ್ತರು ಎಂದು ತಿಳಿದ ತಂಡ ಅವರನ್ನು ರೈಲಿನಿಂದ ಇಳಿಸಿ ಪೊಲೀಸರಲ್ಲಿ ಒಬ್ಬರು ಚೆನ್ನೈ ವ್ಯಕ್ತಿಯ ಸಂಖ್ಯೆಗೆ ಕರೆ ಮಾಡಿದ್ದಾರೆ, ಪೊಲೀಸರ ಕರೆ ಎಂದು ತಿಳಿದ ತಕ್ಷಣ ಅವರು ಕರೆಯನ್ನು ಕಟ್ ಮಾಡಿದ್ದು, ಅವರ ಪೋಷಕರು ಈಗ ಅವರನ್ನು ಮನೆಗೆ ಕರೆದೊಯ್ದಿದ್ದಾರೆ, “ಎಂದು ಮೂಲಗಳು ಮಾಹಿತಿ ನೀಡಿವೆ.

Leave A Reply

Your email address will not be published.