ಆಸ್ಕರ್ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಹಲ್ಲೆ ; ಹಾಲಿವುಡ್ ನಟ ವಿಲ್ ಸ್ಮಿತ್‌ಗೆ 10 ವರ್ಷ ನಿಷೇಧ !

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆಗೆ ಧಾವಿಸಿ ಹಾಸ್ಯನಟ ಕ್ರಿಸ್ ರಾಕ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ಇತ್ತೀಚೆಗೆ ನಡೆದಿತ್ತು. ಈಗ ಎರಡು ವಾರಗಳ ಬಳಿಕ ಹಾಲಿವುಡ್ ನಟ ವಿಲ್ ಸ್ಮಿತ್‌ಗೆ 10 ವರ್ಷ ಆಸ್ಕರ್ ಗೆ ಹಾಜರಾಗದಂತೆ ನಿಷೇಧ ಹೇರಲಾಗಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಯಂಡ್ ಸೈನ್ಸಸ್ ಆಯೋಜಿಸುವ ಯಾವುದೇ ಇತರ ಸಮಾರಂಭಗಳಲ್ಲಿ ಕೂಡಾ ಮುಂದಿನ ಹತ್ತು ವರ್ಷ ಸ್ಮಿತ್ ಭಾಗವಹಿಸುವಂತಿಲ್ಲ.

ಆದರೆ “ಕಿಂಗ್ ರಿಚರ್ಡ್” ಚಿತ್ರದ ಅದ್ಭುತ ನಟನೆಗಾಗಿ ಸ್ಮಿತ್ ಗೆದ್ದಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ವಾಪಾಸು ಪಡೆದಿಲ್ಲ ಅಥವಾ ಭವಿಷ್ಯದಲ್ಲಿ ಆಸ್ಕರ್ ನಾಮನಿರ್ದೇಶಕ್ಕೆ ನಿಷೇಧ ಹೇರುವ ಬಗ್ಗೆ ಅಕಾಡೆಮಿಯ ಮುಖ್ಯಸ್ಥರು ನೀಡಿದ ಪತ್ರದಲ್ಲಿ ಯಾವುದೇ ಉಲ್ಲೇಖ ಇಲ್ಲ.

ಎಪ್ರಿಲ್ 8, 2022 ಕ್ಕೆ ಅನ್ವಯವಾಗುವಂತೆ 10 ವರ್ಷಗಳ ಅವಧಿಗೆ ಸ್ಮಿತ್ ಅವರು ಅಕಾಡೆಮಿಯ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ನೇರವಾಗಿ ಮಾತ್ರವಲ್ಲದೇ ವರ್ಚುವಲ್ ಸಮಾರಂಭಗಳಲ್ಲಿ ಕೂಡಾ ಭಾಗವಹಿಸುವಂತಿಲ್ಲ. ಇದು ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ಸೀಮಿತವಾಗಿರುವುದಿಲ್ಲ” ಎಂದು ಅಧ್ಯಕ್ಷ ಡೇವಿಡ್ ರುಬಿನ್ ಮತ್ತು ಸಿಇಒ ಡ್ವಾನ್ ಹಡ್ನನ್ ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.