ನಾಳೆ ಯಾವುದೇ ಮಾಂಸದ ಅಂಗಡಿ ತೆರೆಯುವಂತಿಲ್ಲ-ಬಿಬಿಎಂಪಿಯಿಂದ ಮಹತ್ವದ ಆದೇಶ!

ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶದಲ್ಲಿ ನಾಳೆ ರಾಮನವಮಿ ಹಬ್ಬದ ಪ್ರಯುಕ್ತ ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.

ವಿವಿಧ ಹಬ್ಬ ಹರಿದಿನಗಳಂದು ಅನೇಕ ಮಾಂಸದಂಗಡಿಗಳು ಸ್ವಯಂ ಆಗಿ ಬಂದ್ ಮಾಡುತ್ತಿದ್ದರು, ಅಲ್ಲದೆ ಗಾಂಧಿ ಜಯಂತಿ,ಮಹಾಶಿವರಾತ್ರಿ ಮತ್ತು ಗಣೇಶ ಚತುರ್ಥಿಯಂದು ಮಾತ್ರವೇ ಮಾಂಸ ಮಾರಾಟವನ್ನು ಅಧಿಕೃತವಾಗಿ ಬಂದ್ ಮಾಡಲಾಗುತ್ತಿತ್ತು.ಇತ್ತೀಚೆಗೆ ಹಬ್ಬ ಹರಿದಿನಗಳಂದು ಸರಕಾರವೇ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸುತ್ತಿದೆ.

ಇನ್ನು, ರಾಜಧಾನಿ ದೆಹಲಿಯ ದಕ್ಷಿಣ ಮತ್ತು ಪೂರ್ವ ಭಾಗದ ಪ್ರದೇಶಗಳಲ್ಲಿ ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಮಾಂಸ ಮಾರಾಟ ನಿಷೇಧ ಹಾಕಲಾಗಿದೆ. ಏಪ್ರಿಲ್ 2ರಂದು ಆರಂಭಗೊಂಡಿರುವ ನಿಷೇಧ 11ನೇ ತಾರೀಖಿನವರೆಗೆ ಇರಲಿದೆ. ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯ ಮೇಯರ್‌ಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.”ಸಾರ್ವಜನಿಕ ಸ್ಥಳ ಅಥವಾ ದೇವಸ್ಥಾನಗಳ ಬಳಿ ಮಾಂಸ ಮಾರಾಟವಾಗುತ್ತಿದ್ದರೆ ಜನರಿಗೆ ಮುಜುಗರಾಗುತ್ತದೆ. ಬಹುಸಂಖ್ಯಾತ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತದೆ” ಎಂದು ಈ ಮೇಯರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪೂರ್ವ ದೆಹಲಿ ನಗರ ಪಾಲಿಕೆ ಮೇಯರ್ ಶ್ಯಾಮ್ ಸುಂದರ್ ಅಗರವಾಲ್ ಅವರು, ನವರಾತ್ರಿ ಹಬ್ಬದಲ್ಲಿ ಮಾಂಸದಂಗಡಿಗಳನ್ನ ಮುಚ್ಚಿದರೆ ನಗರದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಪುಷ್ಟಿ ಸಿಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾಂಸ ಮಾರಾಟ ನಿಷೇಧಿಸುವ ಈ ಕ್ರಮ ಸಾಕಷ್ಟು ಪರ ವಿರೋಧ ಚರ್ಚೆಗೂ ಕಾರಣವಾಗಿದೆ. ದೆಹಲಿಯಲ್ಲಿರುವ ಬಹುತೇಕ ಮಾಂಸದಂಗಡಿಗಳು ಮುಸ್ಲಿಮರಿಗೆ ಸೇರಿದ್ಧಾಗಿದೆ. ಹೀಗಾಗಿ, ಮುಸ್ಲಿಮರನ್ನ ಆರ್ಥಿಕವಾಗಿ ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.ನವರಾತ್ರಿಯಂದು ಮಾಂಸದಂಗಡಿಗಳನ್ನ ಯಾಕೆ ಮುಚ್ಚಬೇಕು? ಉಪವಾಸ ಮಾಡುವವರು ಅಥವಾ ಸಸ್ಯಾಹಾರಿಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಅವರ ಆಹಾರ ಪ್ರವೃತ್ತಿಯನ್ನು ಇತರರ ಮೇಲೆ ಹೇರುವುದು ಎಷ್ಟು ಸರಿ ಎಂದು ಹಲವು ಮಂದಿ ಪ್ರಶ್ನಿಸಿದ್ದಾರೆ.

Leave A Reply

Your email address will not be published.