ಬಂಟ್ವಾಳ : ಕಾರು ಚಾಲಕನ ಅತಿ ವೇಗದ ಚಾಲನೆಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ| ಇಬ್ಬರಿಗೆ ಗಾಯ- ಆಸ್ಪತ್ರೆಗೆ ದಾಖಲು

ಬಂಟ್ವಾಳ : ಓವರ್ ಟೇಕ್ ಮಾಡುತ್ತಿದ್ದ ಭರದಲ್ಲಿ ಕಾರೊಂದು ಮೆಲ್ಕಾರ್ ಟ್ರಾಫಿಕ್ ಠಾಣೆಯ ಮುಂಭಾಗದಲ್ಲಿ ಎದುರಿನಂದ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರತ್ಯೇಕ ದ್ವಿಚಕ್ರ ಸವಾರಿ ಮಾಡುತ್ತಿದ್ದ ಸಹೋದರರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಎ.8 ರ ಶುಕ್ರವಾರ ಸಂಜೆ ವೇಳೆ ನಡೆದಿದೆ.

ಬೋಳಂಗಡಿ ನಿವಾಸಿಗಳಾದ
ರಿಜ್ವಾನ್ ಮತ್ತು ರಮೇಶ್
ಗಾಯಗೊಂಡವರು. ಮಿತಿಮೀರಿದ ವೇಗದ ಚಾಲೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಿಟ್ಲ ಕಡೆಯಿಂದ ಕೆಲಸ ಮುಗಿಸಿ ಅತೀ ವೇಗದಿಂದ ಮನೆಗೆ ಬರುತ್ತಿದ್ದ ಕಾರು ಮೆಲ್ಕಾರ್ ನಿಂದ ಉಪವಾಸ ಬಿಡಲು ಮನೆಗೆ ತೆರಳುತ್ತಿದ್ದ ಹೋಟೆಲ್ ಕಾರ್ಮಿಕರ ದ್ವಿಚಕ್ರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ
ಕೊಂಡಿದ್ದಾರೆ.

error: Content is protected !!
Scroll to Top
%d bloggers like this: