‘ತೂಕ ಕಳ್ಕೊಳ್ಳಿ, ಬೋನಸ್ ಪಡ್ಕೊಳ್ಳಿ ‘ ಚಾಲೆಂಜ್ | ತನ್ನ ಉದ್ಯೋಗಿಗಳು ಇಂತಿಷ್ಟು ಬೊಜ್ಜು ಕರಗಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಘೋಷಿಸಿದ ಈ ತುಳುವ ಉದ್ಯಮಿ!!

ಝೆರೋಧಾ ಎಂಬ ಬ್ರೋಕರೆಜ್ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಒಂದು ಹೊಸ ಹೆಲ್ತ್ ಚಾಲೆಂಜಿಂಗ್ ಘೋಷಿಸಿದ್ದಾರೆ. ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಕರ್ಷಕ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಒಂದು ಹೊಸ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ.

ವಿಶ್ವ ಆರೋಗ್ಯ ದಿನದಂದು, ಸಿಇಒ ನಿತಿನ್ ಕಾಮತ್ ಅವರು ಆರೋಗ್ಯ ಮತ್ತು ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಲು ತಮ್ಮ ಉದ್ಯೋಗಿಗಳಿಗೆ ಕರೆ ನೀಡಿದ್ದು, ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಸುಧಾರಿಸಿಕೊಳ್ಳುವ ಉದ್ಯೋಗಿಗಳಿಗೆ ಈ ವಿಶೇಷ ಬೋನಸ್ ದೊರಕಲಿದೆ.

ಝೆರೋಧಾ ಸಿಇಒ ನಿತಿನ್ ಕಾಮತ್ ಅವರು ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ವರ್ಷ, ವಿಶ್ವ ಆರೋಗ್ಯ ದಿನದಂದು, ಹಣಕಾಸು ಸೇವಾ ಸಂಸ್ಥೆಯಾದ Zerodha, ಆರೋಗ್ಯಕರ ಜೀವನಶೈಲಿಯನ್ನು ಜೀವಿಸಲು ತನ್ನ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಪ್ರಮುಖ ಘೋಷಣೆಯನ್ನು ಮಾಡಿದೆ. ಒಂದು ಸರಳ ಷರತ್ತಿನೊಂದಿಗೆ, ಹಣಕಾಸು ಸೇವೆಗಳ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಬೋನಸ್ ಆಗಿ ಅರ್ಧ ತಿಂಗಳ ಆದಾಯವನ್ನು ನೀಡುವುದಾಗಿ ಅವರು ಗುರುವಾರ ಗೋಷಿಸಿದರು.

ಆರೋಗ್ಯ ಮತ್ತು ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಲು ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಒಂದು ಸರಳವಾದ ವಿಧಾನ. ಕಾಮತ್ ಅವರು ತಮ್ಮ ಲಿಂಕ್ಡ್‌ಇನ್ ಮತ್ತು ಟ್ವಿಟರ್ ಪೋಸ್ಟ್‌ನಲ್ಲಿ, 25 ಕ್ಕಿಂತ ಕಡಿಮೆ BMI ಹೊಂದಿರುವ ಉದ್ಯೋಗಿಗಳು ಅರ್ಧ ತಿಂಗಳ ಆದಾಯದ ಬೋನಸ್ ಅನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಉದ್ಯೋಗಿಯ ಬಿಎಂಐ 24ಕ್ಕಿಂತ ಕಡಿಮೆಯಾದರೆ ಆಗಸ್ಟ್ ವೇಳೆಗೆ ಅರ್ಧ ತಿಂಗಳ ವೇತನದ ಬೋನಸ್ ಸಿಗಲಿದೆ ಎಂದಿದ್ದಾರೆ.

ಕಾಮತ್ ಅವರು ಇದನ್ನೊಂದು “ಆರೋಗ್ಯಕರ ಸ್ಪರ್ಧೆ” ಎಂದು ಉಲ್ಲೇಖಿಸಿ, ಈ ಸವಾಲಿನಲ್ಲಿ ಭಾಗವಹಿಸಲು ಇತರ ಕಂಪನಿಗಳಿಗೂ ಅವರು ಕರೆ ನೀಡಿದ್ದಾರೆ.
“ನಮ್ಮ ತಂಡದ ಸರಾಸರಿ BMI 25.3 ಆಗಿದೆ, ಮತ್ತು ನಾವು ಕಡಿಮೆ ಸರಾಸರಿ BMI ಗೆ ಹೋದರೆ ಅಥವಾ ಸರಾಸರಿ BMI ನಲ್ಲಿ ದೊಡ್ಡ ಬದಲಾವಣೆಯನ್ನು ಸಾಧಿಸಿದರೆ ನಾವು ಗೆದ್ದಂತೆ. ಹಾಗೆ bmi ಸುಧಾರಿಸಿಕೊಂಡ ವಿಜೇತರು ಎಲ್ಲರೂ ಈ ಕೊಡುಗೆಯನ್ನೂ ಪಡೆಯಬಹುದು ನಿತಿನ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, “ಅರೋಗ್ಯ ಮತ್ತು ತಂತ್ರಜ್ಞಾನ ಸಂಸ್ಥೆಗಳು ಈ ಉಪಕ್ರಮದಲ್ಲಿ ಮುಂಚೂಣಿಯಲ್ಲಿ ಭಾಗವಹಿಸಬಹುದು ” ಎಂದೂ ಅವರು ಸೇರಿಸಿದ್ದಾರೆ.

“ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಪತ್ತೆಹಚ್ಚಲು BMI ಉತ್ತಮ ಅಳತೆ ಅಲ್ಲ ಎಂದು ನನಗೆ ತಿಳಿದಿದೆ, ಆದರೆ ಸ್ಟಾರ್ಟ್ ಮಾಡಲು ಇದು ಒಂದು ಸುಲಭವಾದ ಮಾರ್ಗವಾಗಿದೆ. ಆರೋಗ್ಯ ಮತ್ತು ಜೀವನದಲ್ಲಿ ಇತರ ಹೆಚ್ಚಿನ ವಿಷಯಗಳಲ್ಲಿ ಜಸ್ಟ್ ಸ್ಟಾರ್ಟ್ ಅತ್ಯಂತ ಮುಖ್ಯವಾದ ಅಂಶವಾಗಿದೆ” ಎಂದು ಅವರು ಹೇಳಿದರು. ಆರೋಗ್ಯವಾಗಿರಲು ಬಯಸುವ ಪ್ರತಿಯೊಬ್ಬರಿಗೂ ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವುದು ಉತ್ತಮ ಮಾರ್ಗವಾಗಿದೆ.

ಫೋರ್ಬ್ಸ್‌ನ 2021 ರಲ್ಲಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ, ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರೇಜ್ ಹೌಸ್ ಝೆರೋಧಾದ ಸಹ-ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ಅವರ ಹಿರಿಯ ಸಹೋದರ ನಿಖಿಲ್ ಕಾಮತ್ ಅವರು 86 ನೇ ಸ್ಥಾನದಲ್ಲಿದ್ದಾರೆ. ಆರೋಗ್ಯವಂತ ವಯಸ್ಕರು 18.5—24.9 ರಷ್ಟು BMI ಹೊಂದಿರುತ್ತಾರೆ. 25 ಕ್ಕಿಂತ ಮೇಲ್ಪಟ್ಟ BMI ಹೊಂದಿದ ವ್ಯಕ್ತಿಗಳನ್ನು ಧಡೂತಿ ಎಂದು ಕರೆಯಬಹುದು.

Leave A Reply

Your email address will not be published.