ಎಟಿಎಂಗಳಲ್ಲಿ ಇನ್ನು ಮುಂದೆ ಕಾರ್ಡ್ ರಹಿತ ನಗದು ಪಡೆಯು ಸೌಲಭ್ಯ ಶೀಘ್ರದಲ್ಲೇ!!!

0 13

ಎಟಿಎಂಗಳ ಮೂಲಕ
ವಂಚನೆಯನ್ನು ತಡೆಯುವುದಕ್ಕಾಗಿ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು ಪರಿಚಯಿಸಲು ಎಲ್ಲಾ ಬ್ಯಾಂಕ್‌ಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.

ದೇಶದ ಕೆಲವು ಬ್ಯಾಂಕ್‌ಗಳು ಮಾತ್ರ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯ ಸೌಲಭ್ಯವನ್ನು ನೀಡುತ್ತಿವೆ.

‘ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ನೆಟ್‌ವರ್ಕ್‌ಗಳಲ್ಲಿ ಕಾರ್ಡ್-ರಹಿತ ನಗದು ಹಿಂಪಡೆಯುವ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲು ಈಗ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ವಹಿವಾಟು ಸುಲಭ ಆಗುವ ಜೊತೆ ಜೊತೆಗೆ, ಭೌತಿಕ ಕಾರ್ಡ್ ಅಗತ್ಯ ಇರುವುದಿಲ್ಲ. ಹಾಗಾಗಿ, ಕಾರ್ಡ್ ಸ್ಕಿಮ್ಮಿಂಗ್, ಕ್ಲೋನಿಂಗ್ ಇತ್ಯಾದಿ ವಂಚನೆಗಳನ್ನು ತಡೆಯುವಲ್ಲಿ ಬಹುತೇಕ ಸಹಾಯವಾಗುತ್ತದೆ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್)
ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾವನೆ ಮಾಡಲಾಗಿದೆ. ಆದರೆ, ಅಂತಹ ವಹಿವಾಟುಗಳ ಇತ್ಯರ್ಥವು ಎಟಿಎಂ ನೆಟ್‌ವರ್ಕ್‌ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

Leave A Reply