ತುಮಕೂರು- ಬೆಂಗಳೂರು ಪ್ರಯಾಣಿಕರ ಗಮನಕ್ಕೆ; ಚಾಲನೆ‌ ಪಡೆದ ಮೆಮೊ ರೈಲು

ಬೆಂಗಳೂರು- ತುಮಕೂರು ಪ್ರತಿದಿನ ಲಕ್ಷಾಂತರ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಸೌತ್ ವೆಸ್ಟರ್ನ್ ರೈಲ್ವೇ (SWR) ಎರಡು ಡೀಸೆಲ್-ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ರೇಕ್‌ಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತಿಸಲು ಸೂಚನೆ ನೀಡಿದೆ.

ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ವಿದ್ಯುತ್ ಚಾಲಿತ ಮೆಮು ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು-ತುಮಕೂರು ನಡುವೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಈ ಎರಡು ನಗರಗಳ ನಡುವೆ ಡೆಮು ರೈಲಿಗೆ ಬದಲಾಗಿ 16 ಕೋಚಿನ ಮೆಮು ರೈಲು ಸಂಚಾರ ಇಂದಿನಿಂದ ಆರಂಭವಾಗಿದೆ. ಪ್ಯಾಸೆಂಜರ್ ರೈಲು 85 ನಿಮಿಷಗಳು ಮತ್ತು ಡೀಸೆಲ್ ರೈಲು 80 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, MEMU ರೈಲು ಕೇವಲ 70 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 

ತುಮಕೂರು ಕಡೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಬೆಳಿಗ್ಗೆ 9.30 ಕ್ಕೆ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು 11 ಗಂಟೆಗೆ ತುಮಕೂರು ತಲುಪಲಿದೆ. ಇದೇ ರೈಲು ತುಮಕೂರಿನಿಂದ ಬೆಳಗ್ಗೆ 11.15ಕ್ಕೆ ಹೊರಟು ಬೆಂಗಳೂರಿನ ಕೆಎಸ್‌ಆರ್‌ ನಿಲ್ದಾಣವನ್ನು 1.25ಕ್ಕೆ ತಲುಪಲಿದೆ. ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ತುಮಕೂರು ನಗರವನ್ನು 3.20ಕ್ಕೆ ತಲುಪಲಿದೆ. ಮಧ್ಯಾಹ್ನ 3.50ಕ್ಕೆ ತುಮಕೂರಿನಿಂದ ಹೊರಟ ರೈಲು ಕೆ.ಎಸ್‌.ಆರ್ ರೈಲು ನಿಲ್ದಾಣಕ್ಕೆ 5.25ಕ್ಕೆ ಸೇರಲಿದೆ.ಇದರಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರಿಗೆ ಮತ್ತಷ್ಟು ಉಪಯೋಗವಾಗಲಿದೆ.

ಇಂದು ತುಮಕೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಲಿದ್ದು ತುಮಕೂರು ಹಾಗೂ ಕೆಎಸ್‌ಆರ್ ಬೆಂಗಳೂರು ಮೆಮು ರೈಲು ನಿತ್ಯ ಸೇವೆಗೆ ಚಾಲನೆ ನೀಡಲಿದ್ದಾರೆ.

Leave A Reply

Your email address will not be published.