ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ

0 14

ಈಗ ಏನಿದ್ದರೂ ಟೆಕ್ನಾಲಜಿ ಯುಗ. ಹೊಸ ಹೊಸ ರೀತಿಯ ಆವಿಷ್ಕಾರಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ನಡೆದ ಈ ಹೊಸ ಪ್ರಯೋಗವೊಂದು ಎಲ್ಲರನ್ನೂ ಮೂಗಿನ ಮೇಲೆ ಕೈ ಇಡುವಂತೆ ಮಾಡಿದೆ.

ಹೌದು. ಇಲ್ಲೊಂದು ವಿಮಾನ ಅಡುಗೆ ಎಣ್ಣೆಯ ಸಹಾಯದಿಂದ ಮೂರು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿದೆ. ಅಡುಗೆ ಎಣ್ಣೆಯಿಂದ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ?? ಆದರೆ ಇದು ಸಾಬೀತಾಗಿದೆ. ಅಡುಗೆ ಎಣ್ಣೆಯಿಂದ ತಯಾರಿಸಲಾದ ಇಂಧನದಿಂದ ವಿಮಾನವೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಇಂಧನದಿಂದ ವಿಮಾನ 3 ಗಂಟೆಗಳ ಕಾಲ ಪ್ರಾಯೋಗಿಕ ಹಾರಾಟ ನಡೆಸಿದೆ.
ಎ380 ಏರ್‌ಬಸ್ ವಿಮಾನ ಇತ್ತೀಚೆಗೆ ಫ್ರಾನ್ಸ್ ದೇಶದ ಬ್ಲಾಗ್ನಾಕ್ ವಿಮಾನ ನಿಲ್ದಾಣದಿಂದ ಪ್ರಾಯೋಗಿಕ ಹಾರಾಟವನ್ನು ನಡೆಸಿತು. ವಿಶೇಷವೆಂದರೆ ವಿಮಾನದಲ್ಲಿ ಅಡುಗೆ ಎಣ್ಣೆಯನ್ನು ಹೊರತುಪಡಿಸಿ ಬೇರೇನೂ ಬಳಸಲಾಗಿಲ್ಲ.

ಸಸ್ಟೆನೆಬಲ್ ಏವಿಯೇಷನ್ ಫ್ಯೂಯೆಲ್(ಎಸ್‌ಎಎಫ್) ಎಂದು ಕರೆಯಲಾಗುವ ಇಂಧನವನ್ನು ಈ ವಿಮಾನದಲ್ಲಿ ಬಳಸಲಾಗಿದ್ದು, ಇದು ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲ್ಪಟ್ಟಿದೆ. ಕೇವಲ ಒಂದು ರೋಲ್ಸ್ ರಾಯ್ಸ್ ಟ್ರೆಂಟ್ 900 ಎಂಜಿನ್ ಮೂಲಕ ಈ ವಿಮಾನವನ್ನು ಹಾರಿಸಲಾಗಿದೆ.

ಏನಿದು ಎಸ್ಎಎಫ್ ??

ಎಸ್‌ಎಎಫ್ ಒಂದು ರೀತಿಯ ಇಂಧನವಾಗಿದ್ದು, ಇದನ್ನು ಮುಖ್ಯವಾಗಿ ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲಾಗಿದೆ. ಪರೀಕ್ಷೆಯಲ್ಲಿ ಬಳಸಲಾದ ಇಂಧನವನ್ನು ಹೈಡ್ರೊ ಪ್ರೊಸೆಸ್ಡ್ ಎಸ್ರ‍್ಸ್ ಹಾಗೂ ಫ್ಯಾಟಿ ಆಸಿಡ್(ಹೆಚ್‌ಇಎಫ್‌ಎ)ಗಳಿಂದ ತಯಾರಿಸಲಾಗಿದೆ. ಇದು ಸುಗಂಧ ಹಾಗೂ ಸಲ್ಫರ್ ಮುಕ್ತವಾಗಿದ್ದು, ಫ್ರಾನ್ಸ್‌ನ ನಾರ್ಮಂಡಿ ಪ್ರದೇಶದ ಟೋಟಲ್ ಎನರ್ಜಿಸ್ ಕಂಪನಿ ಪೂರೈಸಿದೆ. ಎಸ್‌ಎಎಫ್ ಇಂಧನವನ್ನು ಬಳಸಿ ಹಾರುವ ವಿಮಾನಗಳು ಶೇ.53 ರಿಂದ ಶೇ.71ರ ವರೆಗೆ ಹೊರ ಹಾಕುವ ಇಂಗಾಲವನ್ನು ಕಡಿತಗೊಳಿಸಬಹುದು ಎಂದು ಕಂಪನಿ ತಿಳಿಸಿದೆ.

Leave A Reply