ರಸ್ತೆ ಮಧ್ಯೆಯೇ ಲಾರಿ ನಿಲ್ಲಿಸಿ ಹಾಯಾಗಿ ನಿದ್ರಿಸಿ ಗೊರಕೆ ಹೊಡೆದ ಚಾಲಕ | ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್ !!

ನಿದ್ದೆ ಎಲ್ಲರಿಗೂ ತುಂಬಾ ಮುಖ್ಯವಾದದ್ದು. ನಿದ್ದೆಗೆಟ್ಟರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಂತ ಸಿಕ್ಕಿದ ಕಡೆಯೆಲ್ಲಾ ನಿದ್ದೆ ಮಾಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಲಾರಿ ಚಾಲಕ ರಸ್ತೆ ಮಧ್ಯೆ ಲಾರಿ ನಿಲ್ಲಿಸಿ ಗಡದ್ದಾಗಿ ಗೊರಕೆ ಹೊಡೆಯಬೇಕೇ !?

ಹೌದು. ಇಂತಹದೊಂದು ವಿಚಿತ್ರ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಲಾರಿ ಚಾಲಕ ರಸ್ತೆ ಮಧ್ಯೆ ಲಾರಿ ನಿಲ್ಲಿಸಿ ಚಾಲಕ ನಿದ್ರೆಗೆ ಜಾರಿದ್ದಾನೆ. ಮದ್ಯ ಕುಡಿದ ಮತ್ತಿನಲ್ಲಿ ಲಾರಿ ಚಾಲಕನಿಂದ ಅವಾಂತರ ಆಗಿದೆ ಎಂದು ತಿಳಿದುಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಡಿಕೇರಿ ಸಮೀಪದ ಚೈನ್ ಗೇಟ್ ಬಳಿ ರಸ್ತೆ ಮಧ್ಯೆ ಲಾರಿ ನಿಲ್ಲಿಸಲಾಗಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಲಾರಿ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸ್ಥಳೀಯರು ಬಳಿಕ ಲಾರಿಯನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಲಾರಿ ಕುಶಾಲನಗರದಿಂದ ಮಂಗಳೂರಿಗೆ ತೆರಳುತ್ತಿತ್ತು.

error: Content is protected !!
Scroll to Top
%d bloggers like this: