ಸೇನೆಗೆ ಸೇರಿ ದೇಶ ಸೇವೆ ಮಾಡುವ ಆಸಕ್ತರಿಗೆ ಶುಭ ಸುದ್ದಿ

ದೇಶ ಸೇವೆಯೇ ಈಶ ಸೇವೆ ಎಂಬ ಮಾತಿದೆ. ಸೇನೆಗೆ ಸೇರಬೇಕು ದೇಶಸೇವೆ ಮಾಡಬೇಕು ಎಂಬುದು ಹಲವು ಜನರ ಕನಸಾಗಿರುತ್ತದೆ. ಕನಸು ನೆರವೇರುವ ಸಮಯ ಹತ್ತಿರ ಬರುತ್ತಿದೆ. ಯೋಧರ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡೋದಕ್ಕೆ ಕೇಂದ್ರ ಸರ್ಕಾರ ಮುಂದಾಗಿ ಎಂದು ಹೇಳಲಾಗುತ್ತಿದೆ.

3 ಮಾದರಿಯಲ್ಲಿ ಯೋಧರ ನೇಮಕಕ್ಕೆ ಹೊಸ ವ್ಯವಸ್ಥೆಯನ್ನು ಜಾರಿಗೊಳ್ಳಲಿದೆ. ಎಲ್ಲಾ ಸೈನಿಕರನ್ನು ಟೂರ್ ಆಫ್ ಡ್ಯೂಟಿ ಮಾದರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಸ್ತಾಪಿತ ಕರಡಿನಲ್ಲಿ ತಿಳಿಸಲಾಗಿದೆ.

ಶೆ.25ರಷ್ಟು ಸೈನಿಕರು 3 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ, ಶೇ.25ರಷ್ಟು ಸೈನಿಕರು 5 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಉಳಿದ ಶೇ.50ರಷ್ಟು ಯೋಧರು ನಿವೃತ್ತಿ ವಯಸ್ಸನ್ನು ತಲುಪುವವರೆಗೆ ಪೂರ್ಣ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಈ ಪ್ರಸ್ತಾವಿತ ನೇಮಕಾತಿ ಮಾದರಿಯು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಈ ಮಾದರಿ ಅಡಿಯಲ್ಲಿ ಸೈನಿಕರನ್ನು ಮಾತ್ರ ನೇಮಿಸಿಕೊಳ್ಳಬಹುದು.

ಭಾರತೀಯ ಸೇನೆಯ ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಪ್ರಕಾರ ಒಂದೇ ಸಮಯದಲ್ಲಿ ಸುಮಾರು 40,000 ನೇಮಕಾತಿಗಳಿಗೆ ತರಬೇತಿ ನೀಡಬಹುದು. ಸಾಮಾನ್ಯ ಕರ್ತವ್ಯದ ಸೈನಿಕರಿಗೆ ತರಬೇತಿ ಅವಧಿ 34 ವಾರಗಳಾಗಿದ್ದರೆ, ಟ್ರೇಡ್ಸ್‌ಮೆನ್‌ಗಳಿಗೆ 19 ವಾರಗಳು ಎಂದು ತಿಳಿದುಬಂದಿದೆ.

ಮೂರು ಮತ್ತು ಐದು ವರ್ಷಗಳ ಕೊನೆಯಲ್ಲಿ ನಿವೃತ್ತರಾಗುವ 50% ಸೈನಿಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಮತ್ತು ನಿರ್ದಿಷ್ಟ ಅವಧಿಗೆ ಸಶಸ್ತ್ರ ಪಡೆಗಳ ಅನುಭವಿಗಳಿಗೆ ಅನ್ವಯವಾಗುವ ಕೆಲವು ವೈದ್ಯಕೀಯ ಪ್ರಯೋಜನಗಳನ್ನು ನೀಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

Leave A Reply

Your email address will not be published.