ಮೊದಲ ಮದುವೆ ಮುಚ್ಚಿಟ್ಟು, ಮಾಡೆಲ್ ಜೊತೆ ಎರಡನೇ ಮದುವೆ ಮಾಡಿಕೊಂಡ ಸಬ್ ರಿಜಿಸ್ಟ್ರಾರ್!

ಮದುವೆಯಾಗಿ ಮಗು ಕೊಟ್ಟು ಈಗ ಇನ್ನೊಂದು ಮದುವೆಯಾಗಿ ವಂಚನೆ ಮಾಡಿರುವ ಆರೋಪವೊಂದು ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಉಮೇಶ್ ವಿರುದ್ಧ ಕೇಳಿ ಬಂದಿದೆ. ಸಂತ್ರಸ್ತೆ ನಜ್ಮೀಮ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಕ್ಕಾಗಿ ಮಗುವನ್ನು ಎತ್ತಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ನಿತ್ಯವೂ ಅಲೆದಾಡುತ್ತಿದ್ದಾರೆ ಸಂತ್ರಸ್ತೆ.


Ad Widget

Ad Widget

Ad Widget

ನಜ್ಮೀಮ್ ಖಾನ್ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗಲೆಲ್ಲಾ ಉಮೇಶ್ ಎಸ್ಕೇಪ್ ಆಗ್ತಿದ್ದಾರೆ. ಮನೆಗೆ ಗೂಂಡಾ ಕಳುಹಿಸಿ ಗಲಾಟೆ ಮಾಡಿಸಿ, ಹೆದರಿಸುತ್ತಿರುವುದಾಗಿ ಪ್ರಕರಣ ದಾಖಲಾಗಿದೆ.

ಮೊದಲನೇ ಹೆಂಡತಿ ಇದ್ದರೂ ಸಬ್ ರಿಜಿಸ್ಟ್ರಾರ್ ಉಮೇಶ್ ಇನ್ನೊಬ್ಬ ಮಹಿಳೆಯನ್ನ ಮದುವೆಯಾಗಿದ್ದಾನೆ. ದೆಹಲಿ ಮೂಲದ ನಜ್ಮೀಮ್ ಖಾನ್ ಎಂಬ ಮಹಿಳೆಯನ್ನು ಪ್ರೀತಿಯ ಬಲೆಗೆ ಕೆಡವಿ, ಮದುವೆಯಾಗಿ ಮಗು ಕೊಟ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಆರು ತಿಂಗಳ ಹಿಂದೆ ನ್ಯಾಯಕ್ಕಾಗಿ ಉಮೇಶ್ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಮದುವೆಯಾಗಿದ್ದರೂ, ತನ್ನ ಹೆಸರನ್ನು ರೆಹಾನ್ ಅಹಮದ್ ಎಂದು ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೊದಲನೇ ಹೆಂಡತಿ ಮತ್ತು ಮಕ್ಕಳನ್ನು ತನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ನಜ್ಮೀಮ್ ಖಾನ್‌ಗೆ ಉಮೇಶ್ ಪರಿಚಯಿಸಿದ್ದನಂತೆ. ನಜ್ಮೀಮ್ ಮೂಲತಃ ದೆಹಲಿಯವಳಾಗಿದ್ದು, ಬೆಂಗಳೂರಲ್ಲಿ ಮಾಡೆಲ್ ಆಗಿ ಕೆಲಸ ಮಾಡ್ತಿದ್ದಾಗ ಉಮೇಶ್ ತನ್ನ ಹೆಸರು ಬದಲಾಯಿಕೊಂಡು ಸ್ನೇಹ ಬೆಳೆಸಿದ್ದಾನೆ. ಬಳಿಕ ಸ್ನೇಹ, ಪ್ರೀತಿ, ಲೈಂಗಿಕ ಸಂಬಂಧ ಹಾಗೂ ಮುಸ್ಲಿಂ ಧರ್ಮದ ಮದುವೆ, ಮಗು ಮಾಡಿಕೊಂಡಿದ್ದಾನೆ.

ಮೂರ್ನಾಲ್ಕು ವರ್ಷ ಬಳ್ಳಾರಿಗೆ ಬಂದು ಉಮೇಶ್ ಜತೆಗಿದ್ದಾಗ ಸತ್ಯ ಬಯಲಾಗಿದೆ. ಉಮೇಶ್‌ಗೆ ಅತ್ತಿಗೆ ಇಲ್ಲ, ಹೆಂಡತಿಯನ್ನೇ ಅತ್ತಿಗೆ ಎಂದು ನಂಬಿಸಿದ್ದಾನೆ ಎಂಬು ತಿಳಿದಿದೆ. ಇದೆಲ್ಲ ಗೊತ್ತಾದ ಬಳಿಕ ಹತ್ತು ಕೋಟಿ ವರದಕ್ಷಿಣೆ ಕೊಡು ಎಂದು ಉಮೇಶ್ ಕೇಳಿದ್ದಾನೆ ಎಂದು ನಜ್ಮೀಮ್ ಆರೋಪ ಮಾಡಿದ್ದಾಳೆ.

ಇನ್ನೊಂದೆಡೆ ಹಣಕ್ಕಾಗಿ ಬೇಡಿಕೆ ಇಟ್ಟು ನಜ್ಮೀಮ್ ಖಾನ್ ಬ್ಲಾಕ್ಮೇಲ್ ಮಾಡ್ತಿದ್ದಾಳೆ ಅಂತಾ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಉಮೇಶ್ ಕೂಡ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: