ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ನಿಯಂತ್ರಣ!!! ಮಂಗಳೂರಿನಲ್ಲಿ ಬರೋಬ್ಬರಿ 1001 ಸಂಸ್ಥೆಗಳಿಗೆ ನೋಟಿಸ್ ನೀಡಿದ ಪೊಲೀಸ್ ಇಲಾಖೆ!

ಮಂಗಳೂರು: ಸಾರ್ವಜನಿಕ ಧ್ವನಿವರ್ಧಕ ಬಳಕೆಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಧಾರ್ಮಿಕ, ವಾಣಿಜ್ಯ, ಶೈಕ್ಷಣಿಕ ಕೇಂದ್ರ, ಮನರಂಜನಾ ಕೇಂದ್ರ ಸೇರಿದಂತೆ 1001 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.

ಕಮೀಷನರೇಟ್ ವ್ಯಾಪ್ತಿಯ ಆಯಾ ಸ್ಟೇಷನ್ ವ್ಯಾಪ್ತಿಯ ಸಂಸ್ಥೆಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ರಾತ್ರಿ 70 ಡೆಸಿಬಲ್, ವಾಣಿಜ್ಯ-ವ್ಯವಹಾರ ಪ್ರದೇಶಗಳಲ್ಲಿ ಹಗಲು 65 ಡೆಸಿಬಲ್ ರಾತ್ರಿ 55 ಡೆಸಿಬಲ್,
ವಾಸ್ತವ್ಯ ಪ್ರದೇಶಗಳಲ್ಲಿ ಹಗಲು 55 ಹಾಗೂ ರಾತ್ರಿ 45 ಡೆಸಿಬಲ್ ಇನ್ನುಳಿದಂತೆ ನಿಶ್ಯಬ್ದತೆ ಪ್ರದೇಶಗಳಾದ ಆಸ್ಪತ್ರೆ-ಆಶ್ರಮ ಪ್ರದೇಶಗಳಲ್ಲಿ ಹಗಲು 50 ಮತ್ತು ರಾತ್ರಿ 40 ಡೆಸಿಮಲ್ ಶಬ್ದ ಮೀರದಂತೆ ಆದೇಶ ಹೊರಡಿಸಲಾಗಿದೆ.

ಕಮೀಷನರೇಟ್ ವ್ಯಾಪ್ತಿಯ 357 ದೇವಸ್ಥಾನ, 168 ಮಸೀದಿ 95 ಚರ್ಚ್ ಸೇರಿದಂತೆ ಒಟ್ಟು 1001 ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ.

ಸ್ವತಃ ಸಂಸ್ಥೆಯವರೇ ಈ ಬಗ್ಗೆ ಸ್ವಯಂ ನಿರ್ಬಂಧ ವಿಧಿಸುವಂತೆ ನೋಟೀಸ್‌ನಲ್ಲಿ ತಿಳಿಸಿದ್ದಾರೆ. ಧ್ವನಿವರ್ಧಕ ನಿಯಂತ್ರಣದ ಬಗ್ಗೆ ಈ ಹಿಂದೆ ನ್ಯಾಯಾಲಯಗಳು ಸಹ ಆದೇಶ ನೀಡಿದ್ದವು. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ.

ಈಗ ಸ್ವತಃ ಪೊಲೀಸ್ ಇಲಾಖೆ ಈ ಬಗ್ಗೆ ನೋಟೀಸ್ ನೀಡಿ ನಿಯಮ ಮೀರಿದರೆ ಕ್ರಮ ಕೈಗೊಳ್ಳಲು ಮುಂದಾಗಿದೆ.

Leave A Reply

Your email address will not be published.