ಕವನ ಬರೆದು ಸಾವನಪ್ಪಿದ ಬಾಲಕಿ !

ಹಲವಾರು ಜನ ಕವನ ಬರೆಯುತ್ತಾರೆ. ಕವನ ಸಾಹಿತ್ಯದ ಪ್ರಕಾರವೂ ಹೌದು ಒಂದು ಸವಹನ ಮಾಧ್ಯಮವೂ ಹೌದು. ಕವನ ಬರೆದು ಸ್ಟೇಟಸ್ ಇಡುತ್ತಾರೆ ಅಥವಾ ಓದಿ ಖುಷಿಪಡುತ್ತಾರೆ. ಅಥವಾ ಪುಸ್ತಕ ಪ್ರಕಟಿಸುತ್ತಾರೆ.ಆದರೆ ಇಲ್ಲೊಬ್ಬಳು ಕವನ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ !

ಆತ್ಮಹತ್ಯೆ ಮಾಡಿಕೊಳ್ಳುವಾಗ ಜನ ಡೆತ್ ನೋಟ ಬರೆದಿಡುವುದನ್ನು ಕೇಳಿದ್ದೀರಿ ಆದರೆ ಕವನ ಬರೆದಿರುವುದು ವಿಶೇಷ ! 13 ವರ್ಷದ 8ನೇ ತರಗತಿಯ 
ಬಾಲಕಿಯೊಬ್ಬಳು ಸಾವಿನ ಕುರಿತು ಕವನಗಳು ಮತ್ತು ಉಲ್ಲೇಖಗಳನ್ನು ಬರೆದು ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಈ ಬಾಲಕಿ ಕಳೆದ ಎರಡು ತಿಂಗಳಿನಿಂದ ಮರಾಠಿ ಮತ್ತು ಇಂಗ್ಲಿಷ್‍ನಲ್ಲಿ ಸಾವಿನ ಕುರಿತು ಕವನಗಳನ್ನು ಬರೆಯುತ್ತಿದ್ದಳು. ಪೊಲೀಸರಿಗೆ ಬಾಲಕಿಯ ಮಲಗುವ ಕೋಣೆಯಲ್ಲಿ ನೋಟ್‍ ಬುಕ್ ಸಿಕ್ಮಿದ್ದು, ಅದರಲ್ಲಿ ಕೊರೊನಾವೈರಸ್ ಹರಡಬೇಕು, ಅದರಿಂದ ನಾನು ಸಾಯಬೇಕು ಎಂದು ಬರೆದಿದ್ದಾಳೆ.

ಬಾಲಕಿಯ ತಾಯಿ ಬಾತ್‍ ರೂಮ್‍ ನಲ್ಲಿದ್ದಾಗ ಮತ್ತು ಆಕೆಯ ಸಹೋದರ ಡ್ರಾಯಿಂಗ್ ರೂಮ್‍ ನಲ್ಲಿದ್ದಾಗ ಬಾಲಕಿ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಳ್ಳುತ್ತಿದ್ದಾಳೆ. ತಾಯಿ ಮಲಗುವ ಕೋಣೆಗೆ ಹೋದಾಗ ಮಗಳ ಮೃತದೇಹ ನೇತಾಡುತ್ತಿರುವುದು ಕಂಡುಬಂದಿದೆ.

Leave A Reply

Your email address will not be published.