Day: April 6, 2022

ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮದುವೆ| ಠಾಣೆ ಮುಂದೆ ಸೇರಿದ ಜನಸ್ತೋಮ!

ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಪ್ರೀತಿ ಮಾಡಿ, ರಿಜಿಸ್ಟರ್ ಮದುವೆಯಾಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಿಂದು ಹುಡುಗಿ ಹಾಗೂ ಮುಸ್ಲಿಂ ಹುಡುಗನ ಕಥೆ ಲವ್ ಜಿಹಾದ್ ಕಡೆಗೆ ದಾರಿ ಮಾಡಿಕೊಟ್ಟಿದೆ. ಯುವತಿಯ ಪೋಷಕರು ಇದು ಲವ್ ಜಿಹಾದ್ ಎಂದಿದ್ದು, ಇಲ್ಲಿನ ಉಪನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರೀತಿ ಹೆಸರಲ್ಲಿ ನಡೆದಿರುವ ಲವ್ ಜಿಹಾದ್ ಇದಾಗಿದೆ. ಮದುವೆಯಾದ ಬಳಿಕ ಆಕೆಯನ್ನು ಮತಾಂತರ ಮಾಡುವ ಹುನ್ನಾರ ಇದರಲ್ಲಿ …

ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮದುವೆ| ಠಾಣೆ ಮುಂದೆ ಸೇರಿದ ಜನಸ್ತೋಮ! Read More »

‘ಬ್ರಹ್ಮ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ’ – ಅಸಂಬದ್ಧ ಪಾಠ ಮಾಡಿದ ಪ್ರೊಫೆಸರ್ ಗೆ ಅಮಾನತು ಶಿಕ್ಷೆ!

ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಾಗ ಒಳ್ಳೆಯದು ಕೆಟ್ಟದ್ದು ಯಾವುದು ಎಂದು ಹೇಳಿ ಪಾಠ ಮಾಡುತ್ತಾರೆ. ಮೊದಲೇ ಅವರು ಕಲಿಸುವಂತಹ ವಿಷಯಗಳ ಬಗ್ಗೆ ಅರಿತು ನೀರು ಕುಡಿದಿರುತ್ತಾರೆ. ಮಕ್ಕಳ ಪ್ರಶ್ನೆಗಳಿಗೆ ಇದು ಸಹಕಾರಿ. ಆದರೆ ಇಲ್ಲೊಬ್ಬ ಶಿಕ್ಷಕ ವಿಶ್ವವಿದ್ಯಾಲಯದಲ್ಲಿ ಪೌರಾಣಿಕ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಘಟನೆ ನಡೆದಿರುವುದು ಆಲಿಗಢದಲ್ಲಿ. ಡಾ.ಜಿತೇಂದ್ರ ಕುಮಾರ್ ಅಮಾನತುಗೊಂಡ ಪ್ರೊಫೆಸರ್. ಇವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ …

‘ಬ್ರಹ್ಮ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ’ – ಅಸಂಬದ್ಧ ಪಾಠ ಮಾಡಿದ ಪ್ರೊಫೆಸರ್ ಗೆ ಅಮಾನತು ಶಿಕ್ಷೆ! Read More »

PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಯಲ್ಲಿ ಉದ್ಯೋಗ |ಇಂಟರ್ ನಲ್ ಒಂಬುಡ್ಸ್ ಮೆನ್ ಹುದ್ದೆಗೆ ಅರ್ಜಿ ಆಹ್ವಾನ| ಮಾಸಿಕ ರೂ.1,25,000/- ವೇತನ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಮೂಲಕ ಆಂತರಿಕ ಒಂಬುಡ್ಸ್ ಮನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಭಾರತದಾದ್ಯಂತ ಖಾಲಿ ಇರುವ ಕೆಲ ಆಂತರಿಕ ಓಂಬುಡ್ಸ್‌ಮನ್ ಹುದ್ದೆಗಳ ಭರ್ತಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 7 ವರ್ಷದ ಅನುಭವವಿರಬೇಕು ಹಾಗೂ ವಯಸ್ಸು 65 ವರ್ಷ ದಾಟಿರಬಾರದು. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ …

PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಯಲ್ಲಿ ಉದ್ಯೋಗ |ಇಂಟರ್ ನಲ್ ಒಂಬುಡ್ಸ್ ಮೆನ್ ಹುದ್ದೆಗೆ ಅರ್ಜಿ ಆಹ್ವಾನ| ಮಾಸಿಕ ರೂ.1,25,000/- ವೇತನ! Read More »

ನಶೆಪ್ರಿಯರಿಗೆ ಬೆಲೆ ಏರಿಕೆಯ ಗುನ್ನಾ

ರಾಜ್ಯದ ಬೆಲೆ ಏರಿಕೆಯ  ಬಿಸಿ ಬಿಯರ್ ಬಾಟಲಿಗಳಿಗೂ ತಗುಲಿದೆ. ನಶೆಪ್ರಿಯರ ಕಿಶೆಗೆ ಕನ್ನ ಬೀಳಲಿದೆ. ದಿನಕ್ಕೆ ಒಂದು ಬಿಯರ್ ಕುಡಿಯದೇ ನಿದ್ದೆ ಬರುವುದಿಲ್ಲ ಎನ್ನುವವರ ನಿದ್ದೆಗೆ ಗುನ್ನಾ ಕೊಡಲು ಬಿಯರ್ ದರ ಹೆಚ್ಚಳವಾಗಿದೆ. ಬೇಯುವ ಬೇಸಿಗೆಕಾಲದ ಹೇಳಿ ಸಂಜೆಗಳಲ್ಲಿ, ತಣ್ಣಗಿನ ನೊರೆಯಾಡುವ ಬೀರು ಹೀರುತ್ತಾ ಸೆಕೆ ಮರೆಯುವ ಬೀರಬಲ್ಲರಿಗೆ ಮತ್ತೆ ಕಾದಿದೆ ಬೆಲೆ ಏರಿಕೆಯ ಬಿಸಿ. ಅತ್ತ ತಮ್ಮ ಪ್ರೀತಿಯ ಗುಳ್ಳೆ ಭರಿತ ಕೆಂಪು ಪಾನೀಯ ಬಿಡಂಗಿಲ್ಲ, ಇತ್ತ ಏರುತ್ತಿರುವ ಪಾನೀಯ ಕೊಳ್ಳಂಗಿಲ್ಲ. ಇದು ಇವತ್ತಿನ ಪರಿಸ್ತಿತಿ. ಬಿಯರ್‌ …

ನಶೆಪ್ರಿಯರಿಗೆ ಬೆಲೆ ಏರಿಕೆಯ ಗುನ್ನಾ Read More »

ಕರ್ತವ್ಯ ನಿರತ ಉಪತಹಶೀಲ್ದಾರ್ ಹೃದಯಾಘಾತದಿಂದ‌ ನಿಧನ

ಶಿವಮೊಗ್ಗ : ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯ ಕರ್ತವ್ಯ ನಿರತ ಉಪತಹಶೀಲ್ದಾರ್ ಚೆನ್ನಕೇಶವ (46) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ ಕರ್ತವ್ಯ ನಿರತ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು ವಿವಿಧ ಹಂತದ ಪದೋನ್ನತಿ ಹೊಂದಿ ಉಪತಹಶೀಲ್ದಾರರಾಗಿದ್ದರು. ಸೊರಬ …

ಕರ್ತವ್ಯ ನಿರತ ಉಪತಹಶೀಲ್ದಾರ್ ಹೃದಯಾಘಾತದಿಂದ‌ ನಿಧನ Read More »

ಸುಬ್ರಹ್ಮಣ್ಯ : ಬಾವಿಗೆ ಬಿದ್ದ ಕಾಳಿಂಗ ಸರ್ಪ! ಹಾವನ್ನು ಮೇಲಕ್ಕೆತ್ತಿ ಕಾಡಿಗೆ ಬಿಟ್ಟ ಸ್ಥಳೀಯರು

ಸುಬ್ರಹ್ಮಣ್ಯ: ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ ಕಾರ್ಯ ಇಲ್ಲಿನ ಕೊಲ್ಲಮೊಗ್ರುವಿನ ತಂಬಿನಡ್ಕ ಬಳಿ ಎ.4 ರಂದು ನಡೆದಿದೆ ಲೋಕೇಶ್ ತಂಬಿನಡ್ಕ ಎಂಬವರ ಮನೆಯ ಬಾವಿಗೆ ಕಾಳಿಂಗ ಸರ್ಪ ಬಿದ್ದಿದ್ದು ಕಂಡು ಬಂದಿದೆ. ಕೂಡಲೇ ಸುಬ್ರಹ್ಮಣ್ಯದ ಮಾಧವರನ್ನು ಕರೆಯಿಸಿ ಸರ್ಪವನ್ನು ಮೇಲೆಕ್ಕೆತ್ತಲಾಯಿತು.ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ !! | ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಕಂಪ್ಯೂಟರ್ ಹಾಗೂ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ 3 ತಿಂಗಳ ಉಚಿತ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪಿಯುಸಿ, ಪದವಿ, ಡಿಪ್ಲೊಮಾ ಪದವಿ ಹೊಂದಿದವರಿಗೆ ಆದ್ಯತೆ ಇರುತ್ತದೆ. 18ರಿಂದ 27 ವರ್ಷದೊಳಗಿನವರು ಹಾಗೂ ಪರಿಶಿಷ್ಟ ಜಾತಿ/ ವರ್ಗದಲ್ಲಿ 30 ವರ್ಷದವರೆಗಿನ ವಯಸ್ಸಿನವರು ಈ ತರಬೇತಿ ಪಡೆಯಲು ಅರ್ಹರು. ಬೆಂಗಳೂರಿನ ಮಲ್ಲೆಶ್ವರದಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ …

ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ !! | ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ನಿಯಂತ್ರಣ!!! ಮಂಗಳೂರಿನಲ್ಲಿ ಬರೋಬ್ಬರಿ 1001 ಸಂಸ್ಥೆಗಳಿಗೆ ನೋಟಿಸ್ ನೀಡಿದ ಪೊಲೀಸ್ ಇಲಾಖೆ!

ಮಂಗಳೂರು: ಸಾರ್ವಜನಿಕ ಧ್ವನಿವರ್ಧಕ ಬಳಕೆಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಧಾರ್ಮಿಕ, ವಾಣಿಜ್ಯ, ಶೈಕ್ಷಣಿಕ ಕೇಂದ್ರ, ಮನರಂಜನಾ ಕೇಂದ್ರ ಸೇರಿದಂತೆ 1001 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಕಮೀಷನರೇಟ್ ವ್ಯಾಪ್ತಿಯ ಆಯಾ ಸ್ಟೇಷನ್ ವ್ಯಾಪ್ತಿಯ ಸಂಸ್ಥೆಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ರಾತ್ರಿ 70 ಡೆಸಿಬಲ್, ವಾಣಿಜ್ಯ-ವ್ಯವಹಾರ ಪ್ರದೇಶಗಳಲ್ಲಿ ಹಗಲು 65 ಡೆಸಿಬಲ್ ರಾತ್ರಿ 55 ಡೆಸಿಬಲ್,ವಾಸ್ತವ್ಯ ಪ್ರದೇಶಗಳಲ್ಲಿ ಹಗಲು 55 ಹಾಗೂ ರಾತ್ರಿ 45 ಡೆಸಿಬಲ್ ಇನ್ನುಳಿದಂತೆ ನಿಶ್ಯಬ್ದತೆ ಪ್ರದೇಶಗಳಾದ ಆಸ್ಪತ್ರೆ-ಆಶ್ರಮ ಪ್ರದೇಶಗಳಲ್ಲಿ …

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ನಿಯಂತ್ರಣ!!! ಮಂಗಳೂರಿನಲ್ಲಿ ಬರೋಬ್ಬರಿ 1001 ಸಂಸ್ಥೆಗಳಿಗೆ ನೋಟಿಸ್ ನೀಡಿದ ಪೊಲೀಸ್ ಇಲಾಖೆ! Read More »

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಉಚ್ಚಿಲ ಪದಚ್ಯುತಿ!! ಎರಡು ಬಾರಿ ಅಧ್ಯಕ್ಷನಾಗಿದ್ದರೂ ಆದೇಶ ಹೊರಡಿಸಿದ ಕಾರಣ ನಿಗೂಢ!!?

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ರಾಜ್ಯ ಪಾಲರ ಆದೇಶದ ಪ್ರಕಾರ ದಿಢೀರ್ ಪದಚ್ಯುತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಉಪಾಧ್ಯರಾಗಿ ಪಕ್ಷ ಮುನ್ನಡೆಸಿದ್ದ ಉಚ್ಚಿಲ ಅವರಿಗೆ ಎರಡು ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಡಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಕಾರಣ ತಿಳಿದಿಲ್ಲ, ಎರಡು ಬಾರಿ ಅಧ್ಯಕ್ಷನಾಗಿ ಉತ್ತಮ ಕಾರ್ಯ ನಡೆಸಿ ಮುನ್ನಡೆಸಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉಚ್ಚಿಲ ಪ್ರತಿಕ್ರಿಯಿಸಿದ್ದಾರೆ.

ಟೈಮಿಂಗ್ಸ್ ವಿಚಾರವಾಗಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಖಾಸಗಿ ಬಸ್ ನಿರ್ವಾಹಕರು|ಬೀದಿ ಜಗಳದ ವಿಡಿಯೋ ವೈರಲ್

ಉಡುಪಿ: ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಖಾಸಗಿ ಬಸ್ ನಿರ್ವಾಹಕರಿಬ್ಬರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

error: Content is protected !!
Scroll to Top