ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಯುವತಿ ಸಾವು!! ಯಂತ್ರಕ್ಕೆ ವೇಲ್ ಸಿಲುಕಿ ಮೃತಪಟ್ಟ ಹಿನ್ನೆಲೆ-ಫ್ಯಾಕ್ಟರಿ ಮಾಲೀಕನ ವಿರುದ್ಧ ಪ್ರಕರಣ ದಾಖಲು
ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊರ್ವಳು ಯಂತ್ರದ ಮೇಲೆ ಬಿದ್ದು ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದ್ದು,ಪ್ರಕರಣದ ಸಂಬಂಧ ಫ್ಯಾಕ್ಟರಿ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದ ಘಟನೆ ಚಂದ್ರ ಲೇಔಟ್ ನಲ್ಲಿರುವ ಜೆಡ್.ಎಸ್ ಪ್ಲಾಸ್ಟಿಕ್ ಫ್ಯಾಕ್ಟರಿ ಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಶಾಜಿಯಾ(28) ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲ ಸಮಯದಿಂದ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು, ಘಟನೆ ನಡೆದ ದಿನ ಯಂತ್ರವೊಂದರ ಸ್ವಿಚ್ ಒಫ್ ಮಾಡಲು ತೆರಳಿದ್ದಳು. ಈ ಸಂದರ್ಭ ಆಕೆ ಧರಿಸಿದ್ದ ವೇಲ್ ಯಂತ್ರಕ್ಕೆ ಸಿಲುಕಿದ ಪರಿಣಾಮ ಆಕೆ ಆಯತಪ್ಪಿ ಯಂತ್ರದ ಮೇಲೆಯೇ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.