ಓಟಿಟಿಗೆ ಲಗ್ಗೆ ಇಟ್ಟ ಜೇಮ್ಸ್ ; ಅಭಿಮಾನಿಗಳಿಗೆ ಧಮಾಕಾ
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಾಗಿ ಅಭಿನಯಿಸಿದ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17ರಂದು ಬಿಡುಗಡೆಯಾಗಿ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿ, ಅಪಾರ ಮೆಚ್ಚುಗೆ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿದೆ. ಕೊನೆಯ ಬಾರಿ ತೆರೆಯ ಮೇಲೆ ನೆಚ್ಚಿನ ನಟನನ್ನ ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ ಜೊತೆಗೆ ಕಣ್ಣೀರು ಹಾಕಿದ್ದಾರೆ.
ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಜೇಮ್ಸ್ಇದೀಗ ಒಟಿಟಿಗೆ ಎಂಟ್ರಿಯಾಗುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಾವಾಗ ಬೇಕಾದಾಗ ನಾವು ಅಪ್ಪುನನ್ನು ನೋಡಿ ಅಪ್ಪಿಕೊಳ್ಳಬಹುದೆಂದು ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದಾರೆ. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ಜೇಮ್ಸ್ ಸೋನಿ ಲೈವ್ನಲ್ಲಿ ಸಿನಿಮಾ ಏಪ್ರಿಲ್ 14ರಿಂದ ದೊರೆಯಲಿದೆ.