ಹೊಚ್ಚ ಹೊಸ ರಾಯಲ್ ಏನ್ ಫೀಲ್ಡ್ ಬೈಕ್ ಸ್ಪೋಟ ! ಸ್ಫೋಟದ ತೀವ್ರತೆಯ ವೀಡಿಯೋ ನೋಡಿ
ಒಂದು ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಅಂತಃಪುರ ಜಿಲ್ಲೆಯಲ್ಲಿ ಟೆಂಪಲ್ ಒಂದರ ಮುಂದೆ ನಿಲ್ಲಿಸಿದ್ದ ಬೈಕಿನಲ್ಲಿ ಸ್ಪೋಟ ಸಂಭವಿಸಿದೆ. ರಾಯಲ್ ಎನ್ಫೀಲ್ಡ್ ಮಾಲಿಕನನ್ನು ರವಿಚಂದ್ರ ಎಂದು ಗುರುತಿಸಲಾಗಿದೆ.
ಹೊಸದಾಗಿ ಕೊಂಡ ರಾಯಲ್ ಎನ್ಫೀಲ್ಡ್ ಬೈಕ್ ಹತ್ತಿ ರವಿಚಂದ್ರ ಅವರು ಮೈಸೂರಿನಿಂದ ಆಂಧ್ರಪ್ರದೇಶದ ಗುಂಟಕಲ್ ಮಂಡಲದ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪೂಜೆ ಮಾಡಿಸಲು ಹೊರಟಿದ್ದರು. ಹೊಸ ಬೈಕ್ ಕೊಂಡ ಉತ್ಸಾಹದಲ್ಲಿ non-stop ಆಗಿ ಮೈಸೂರಿನಿಂದ 470 ಕಿಲೋಮೀಟರ್ ದೂರಕ್ಕೆ ಪ್ರಯಾಣ ಬೆಳೆಸಿದ್ದರು ರವಿಚಂದ್ರ. ಅಲ್ಲಿ ದೇವಾಲಯ ತಲುಪಿದ ಸ್ವಲ್ಪ ಸಮಯದ ನಂತರ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಜನರು ಗಾಬರಿ ಬಿದ್ದು ಓಡಿದ್ದರು. ನಂತರ ಸಾರ್ವಜನಿಕರು ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದರು.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಘಟನೆಗೆ ಖಚಿತ ಕಾರಣ ತಿಳಿದುಬಂದಿಲ್ಲವಾದರೂ, ಬೈಕ್ ಅನ್ನು ನಾನ್ ಸ್ಟಾಪ್ ಆಗಿ ಓಡಿಸಿದ ಕಾರಣ, ಬಿಸಿಯಾಗಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನಲಾಗಿದೆ.
ಕಳೆದ ಕೆಲದಿನಗಳ ಹಿಂದೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ತಂದೆ-ಮಗಳು ದಾರುಣ ಸಾವನ್ನಪ್ಪಿದ ಘಟನೆ ನಡೆದದ್ದನ್ನು ಇಲ್ಲಿ ಸ್ಮರಿಸಬಹುದು.