ಮುಸ್ಲಿಂ ಹುಡುಗಿ, ಕ್ರಿಶ್ಚಿಯನ್ ಹುಡುಗ.. ಪವಿತ್ರ ಹಿಂದೂ ಧರ್ಮದ ಪದ್ಧತಿಯಂತೆ ನಡೆಯಿತು ಇವರ ವಿವಾಹ !! | ಮದುವೆ ಬಳಿಕ ಜೀವನಪೂರ್ತಿ ಸನಾತನ ಧರ್ಮ ಪಾಲಿಸಲು ನವ ಜೋಡಿ ನಿರ್ಧಾರ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಘಟ್ಟ. ತಾವು ಪ್ರೀತಿಸಿದವರ ಕೈ ಹಿಡಿಯುವುದು ಅದೃಷ್ಟ ಎಂದೇ ಹೇಳಬಹುದು. ಹಾಗೆಯೇ ಇಲ್ಲೊಂದು ಕಡೆ ಪವಿತ್ರ ಹಿಂದೂ ಧರ್ಮದ ಕಡೆ ಒಲವು ತೋರಿಸಿರುವ ಅನ್ಯ ಧರ್ಮದ ಯುವಕ-ಯುವತಿ ಪಾಣಿಗ್ರಹಣ ಆಗಿದ್ದಾರೆ. ಕ್ರೈಸ್ತ ಸಮುದಾಯದ ವರ, ಮುಸ್ಲಿಂ ಯುವತಿ ಇವರಿಬ್ಬರೂ ಹಿಂದೂ ಪದ್ಧತಿಯಂತೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

2022 ಮಾರ್ಚ್ 30 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹ ನಡೆದಿದೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸುಮಿತ್ ಮತ್ತು ನೂರ್ ಪರಿಚಯವಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಇಬ್ಬರ ಮನೆಯವರ ಕಡೆಯಿಂದಲೂ ಧರ್ಮ ಅಡ್ಡಿಯಾಯಿತು. ಸನಾತನ ಪದ್ಧತಿಗಳ ಬಗ್ಗೆ ಅದಾಗಲೇ ಅರಿವು ಮತ್ತು ಪ್ರೀತಿ ಹೊಂದಿದ್ದ ಸುಮಿತ್ ತಾವಿಬ್ಬರೂ ಹಿಂದೂ ಧರ್ಮಕ್ಕೆ ಮರಳುವ ಪ್ರಸ್ತಾಪ ಇಟ್ಟಾಗ, ಅದು ನೂರ್‌ಗೆ ಒಪ್ಪಿಗೆಯಾಯಿತು. ಆಕೆ ನಿಶಾ ಆಗಿ ಬದಲಾಗಿದ್ದಾಳೆ.

https://twitter.com/STVRahul/status/1509764877669519360?s=20&t=0TQyR9-HoZp6lgdIC9XGIw

ವಿವಾಹ ಸಂದರ್ಭದಲ್ಲಿ ತಾವಿಬ್ಬರೂ ಸನಾತನ ಧರ್ಮದ ಪದ್ಧತಿಗಳನ್ನು ಜೀವನಪೂರ್ತಿ ಅನುಸರಿಸುವುದಾಗಿ ಘೋಷಿಸಿಕೊಂಡಿರುವ ನಿಶಾ, ತಾನು ಈ ಹಿಂದಿನಿಂದಲೇ ದುರ್ಗೆಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ. ಈ ವಿವಾಹದ ನಂತರ ಹುಡುಗಿಯ ಕುಟುಂಬವು ದೂರು ದಾಖಲಿಸಿದ್ದು, ಸುಮಿತ್ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆಯಾಗಿರುವುದಾಗಿ ವಧು ಕುಟುಂಬಸ್ಥರು ಆರೋಪಿಸಿದ್ದಾರೆ.

Leave A Reply

Your email address will not be published.