ಮೂಡುಬಿದ್ರೆಯಲ್ಲಿ ನಡೆದ ಬೈಕ್ ನಡುವಿನ ಅಪಘಾತದಲ್ಲಿ ಬೆಳ್ತಂಗಡಿಯ ವ್ಯಕ್ತಿ ಸಾವು|ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ

0 17

ಮೂಡಬಿದರೆ: ಕೊಡಂಗಲ್ಲುವಿನಲ್ಲಿ ಇಂದು ಮಧ್ಯಾಹ್ನ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (35)
ಎಂಬವರು ಸಾವನ್ನಪ್ಪಿದ್ದಾರೆ.

ಮೃತ ರವೀಂದ್ರ ಅವರು ಮೂಡುಬಿದಿರೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಸಹೋದರನೊಂದಿಗೆ ತೆರಳುತ್ತಿದ್ದ ವೇಳೆ ಕೊಡಂಗಲ್ಲು ಸಮೀಪ ಎದುರುಗಡೆಯಿಂದ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಝಸ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ.ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ರವೀಂದ್ರ ಸಾವನ್ನಪ್ಪಿದ್ದಾರೆ.ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ ಅವರ ಸಹೋದರ ರಾಜೇಂದ್ರ ಪೂಜಾರಿ ಗಾಯಗಳಾಗಿದ್ದು,ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಇನ್ನು ರವೀಂದ್ರ ಪೂಜಾರಿಯವರ ಅಗಲಿಕೆಯ ನೋವಿನಲ್ಲೂ ಅವರ ಕುಟುಂಬದವರು ಅವರ ಕಣ್ಣುಗಳನ್ನು ಸ್ವಇಚ್ಛೆಯಿಂದ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Leave A Reply