ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಂದ ತಾಯಿ | 6 ವರ್ಷದ ಬಾಲಕನ ಕಳೆದುಕೊಂಡ ತಂದೆಯ ಗೋಳಾಟ!

ಲೋಕದಲ್ಲಿ ಕೆಟ್ಟ ತಂದೆಯಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿಸಿದ್ದಾಳೆ. ಈ ನಿರ್ದಯಿ ತಾಯಿ ತನ್ನ ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೌದು ಈ ಘಟನೆ ನಡೆದಿರುವುದು ಹರ್ಯಾಣದ ಯಮುನಾ ನಗರದ ಜಯಧಾರಿ ಗ್ರಾಮದಲ್ಲಿ.

ಕಠೋರ ಮನಸ್ಸಿನ ತಾಯಿಯ ಕೃತ್ಯ ಇದು. ಕನ್ನಯ್ಯಾ ( 6) ಎಂಬ ಬಾಲಕನೇ ತಾಯಿಯಿಂದ ಕೊಲೆಗೀಡಾದ ಬಾಲಕ. ತಂದೆ ಧರಂವೀರ್ ಅವರು ಕೆಲಸಕ್ಕೆ ಹೋಗಿದ್ದಾಗ ತಾಯಿ ಈ ಕೃತ್ಯ ಎಸಗಿದ್ದಾಳೆ. ಈ ವೇಳೆ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಮಗನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಡಾಕ್ಟರ್ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.


Ad Widget

Ad Widget

Ad Widget

ವಿಷಯ ತಿಳಿದ ಅಸಹಾಯಕ ತಂದೆ ಆಸ್ಪತ್ರೆಯ ಹೊರಗೆ ಎದೆಯೊಡೆದು ಅಳಲು ಪ್ರಾರಂಭಿಸಿದ್ದಾನೆ. ಅಮಾಯಕ ಬಾಲಕನನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾಲಕನ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿವೆ. ಇನ್ನೂ ತಾಯಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ತನಿಖಾಧಿಕಾರಿ ಸಂದೀಪ್ ಹೇಳಿದ್ದಾರೆ.

ಧರಂವೀರ್ ಕಷ್ಟಪಟ್ಟು ದುಡಿದು ತನ್ನ ಕುಟುಂಬವನ್ನು ಪೋಷಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೃತಪಟ್ಟ ಬಾಲಕ ಆಕೆಯ ಕಿರಿಯ ಮಗನಾಗಿದ್ದನು.

Leave a Reply

error: Content is protected !!
Scroll to Top
%d bloggers like this: