ಈ ಸಮುದಾಯದ ಜನರ ಜೀವಿತಾವಧಿ ಬರೋಬ್ಬರಿ 120 ವರ್ಷ !

ಪಾಕಿಸ್ತಾನದಲ್ಲಿರುವ ಈ ಸಮುದಾಯದ ಜನರು 120 ವರ್ಷಗಳ ಕಾಲ ತುಂಬು ಜೀವನ ಜೀವಿಸುತ್ತಾರೆ. ಇದರ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆದಿದೆ.

ಇದು ಉತ್ತರ ಪಾಕಿಸ್ತಾನದಲ್ಲಿ ನೆಲೆಸಿದ ಹುಂಜಾ ಸಮುದಾಯ. ಹುಂಜಾ ಸಮುದಾಯದ ಜನರು 120 ವರ್ಷಗಳ ಕಾಲ ಬದುಕುತ್ತಿದ್ದಾರೆ,ಇಲ್ಲಿನ ಜನರು ಒಮ್ಮೆಯೂ ಹಾಸಿಗೆ ಹಿಡಿಯೋಲ್ಲ, ರೋಗ-ರುಜಿನ ಇವರ ಹತ್ತಿರಕ್ಕೂ ಸುಳಿಯೋಲ್ಲ. ಯಾರೂ ಮೆಡಿಸಿನ್ ತಗೊಳಲ್ಲ. ಪುಟ್ಟ ಆ ಗುಡ್ಡಗಾಡಿನ ಊರಿನಲ್ಲಿ ಆಸ್ಪತ್ರೆ ಇಲ್ಲ. ಒಂದು ಮೆಡಿಕಲ್ ಸೆಂಟರ್ ಇದೆ. ಅದು ಯಾವತ್ತೂ ಖಾಲಿ ಹೊಡೆಯುತ್ತಾ ಬಿದ್ದಿರುತ್ತದೆ. ಕಾರಣ ಅಲ್ಲಿ ಹುಷಾರು ತಪ್ಪುವುದಿಲ್ಲ !!

ಅವರು ವಿಶ್ವದ ದೀರ್ಘಕಾಲ ಬದುಕಿದ, ಸಂತೋಷಭರಿತ ಮತ್ತು ಆರೋಗ್ಯವಂತ ಜನರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಸರಾಸರಿ ಜೀವಿತಾವಧಿ ಸುಮಾರು 120 ವರ್ಷಗಳು, ಇದು ವಿಶ್ವದ ಯಾವುದೇ ದೇಶದ ಯಾವುದೇ ಸಮುದಾಯಕ್ಕಿಂತ ಹೆಚ್ಚಾಗಿದೆ.

ಹುಂಜಾ ಕಣಿವೆಯು ಒಂದು ಬೆಟ್ಟದ ಮೇಲೆ ನೆಲೆಗೊಂಡಿದೆ.
ಹುಂಜಾ ಸಮುದಾಯದ ವಿಶಿಷ್ಟ ಜೀವನ ವಿಧಾನಗಳಿಂದಾಗಿ ಅವುಗಳ ಬಗ್ಗೆ ಅನೇಕ ಪುಸ್ತಕಗಳನ್ನು ಸಹ ಬರೆಯಲಾಗಿದೆ. ಸಿನೆಮಾಗಳನ್ನು ಸಹ ಮಾಡಲಾಗಿದೆ. ಅಧ್ಯಯನದ ಪ್ರಕಾರ ಇಲ್ಲಿನ ಮಣ್ಣು ತುಂಬಾ ಫಲವತ್ತಾಗಿರುತ್ತದೆ. ಅಲ್ಲಿ ಬೀಜ ಊರಿ ಬಿಟ್ಟರೆ ಸಾಕು, ಆಮೇಲಿನದನ್ನು ಪ್ರಕೃತಿ ತಾನೇ ನೋಡಿಕೊಳ್ಳುತ್ತದೆ. ಅವರು ಕೃಷಿಯಲ್ಲಿ ರಸಗೊಬ್ಬರಗಳನ್ನು ಬಳಸುವುದಿಲ್ಲ. ಕೀಟನಾಶಕಗಳು ಎಂದರೆ ಏನೆಂದು ಅವರಿಗೆ ತಿಳಿದಿಲ್ಲ. ಅಷ್ಟು ಪರಿಶುದ್ಧವಾಗಿದೆ ಅವರ ಮಣ್ಣು. ಅಂತಹ ಸಾವಯವ ಭೂಮಿಯಲ್ಲಿ ಬೆಳೆದಿದ್ದೆಲ್ಲವೂ ಆರೋಗ್ಯಭರಿತ ಆಹಾರಗಳು.

ಇಲ್ಲಿ ಉತ್ತಮ ಕೃಷಿ ಮಾಡುವುದು ಕಷ್ಟವಲ್ಲ. ಅವರ ಆಹಾರವು ಶುದ್ಧ ಸಾವಯವ ತರಕಾರಿಗಳು ಮತ್ತು ಹಣ್ಣುಗಳನ್ನು ಒಳಗೊಂಡಿದೆ. ಟೊಮೇಟೊ, ಕ್ಯಾಬೇಜ್, ಕ್ಯಾರೆಟ್ ಮುಂತಾದ ತರಕಾರಿಗಳು ಮತ್ತು ಹಲವು ತರಹದ ಕಾಳುಗಳು ಅವರ ಆಹಾರ. ಅಲ್ಲದೆ ಅಪ್ರಿಕೊಟ್ ಅನ್ನುವ ಬೀಜವನ್ನು ಅಲ್ಲಿನ ಜನ ವಿಪರೀತವಾಗಿ ಬಳಸುತ್ತಾರೆ. ಅದು ಕೂಡ ಅಲ್ಲಿನ ಜನರ ಒಂದು ಆಯುಷ್ಯ ವರ್ಧಕ ಜೀವನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆಹಾರ ಮತ್ತು ಜೀವನಶೈಲಿಗಳು ಒಂದು ಸಮುದಾಯದ ಆರೋಗ್ಯ ಮತ್ತು ಆಯುಷ್ಯದ ಗುಟ್ಟು ಎನ್ನುವುದು ಜಗತ್ತು ಕಂಡಿರುವ ಸತ್ಯ. ಇಲ್ಲಿಯ ಜನರು ಪರಿಶುದ್ಧವಾದ ಆಹಾರವನ್ನು ಸೇವಿಸುತ್ತಾದ್ದರಿಂದ ಯಾವುದೇ ರೋಗರುಜಿನಗಳು ಇಲ್ಲದೆ ಆರೋಗ್ಯವಾಗಿ ಸುದೀರ್ಘಕಾಲ ಬದುಕುತ್ತಿದ್ದಾರೆ. ಇದು ಅವರಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಇಲ್ಲಿನ ನೀರು ಸಹ ತುಂಬಾ ಶುದ್ಧವಾಗಿದೆ. ಅವರು ದೀರ್ಘಕಾಲ ಬದುಕಲು ಇನ್ನೊಂದು ಕಾರಣ ಅವರು ಬಳಸುವ ಮಿತ ಆಹಾರ. ಸಾಮಾನ್ಯ ಅಮೆರಿಕನ್ ಪ್ರಜೆ 3000 ಕ್ಯಾಲೋರಿಗಳಷ್ಟು ಆಹಾರವನ್ನು ಸೇವಿಸುತ್ತಾರೆ. ಆದರೆ ಹುಂಜಾ ಸಮುದಾಯದವರು ಸರಿಸುಮಾರು 1900 ಕ್ಯಾಲೋರಿಯಷ್ಟು ಪ್ರಮಾಣದ ಆಹಾರವನ್ನು ಮಾತ್ರ ಬಳಸುತ್ತಾರೆ. ಕಾರಣ ಅಲ್ಲಿ ಆಹಾರದ ಕೊರತೆ. ಬಡತನ ಕೂಡ ಆರೋಗ್ಯ ಮತ್ತು ಆಯುಷ್ಯ ವರ್ಧಕ ಎನ್ನುವ ಸತ್ಯ ಸಮುದಾಯದ ಮೂಲಕ ಜಗತ್ತಿಗೆ ಮತ್ತೊಮ್ಮೆ ಸಾಬೀತಾಯಿತು. ಶುದ್ಧ ನೀರು, ಶುದ್ಧ ಆಹಾರ ಪರಿಶುದ್ಧಗಾಳಿ, ಎಷ್ಟು ಬೇಕೋ ಅಷ್ಟು ಪ್ರಮಾಣದ ಕನಿಷ್ಠ ಆಹಾರ, ಮತ್ತು ಮುಖ್ಯವಾಗಿ ನೆಮ್ಮದಿಯ ಯಾವುದೇ ಜಂಜಡಗಳಿಲ್ಲದ ಒತ್ತಡಗಳಿಗೆ ಮಣಿಯದೆ ಬದುಕುತ್ತಿದ್ದಾರೆ ಹುಂಜಾ ಬುಡಕಟ್ಟಿನವರು. ಅವರು ಎಷ್ಟು ಆರೋಗ್ಯವಂತರು ಎಂದರೆ 80-90 ವರ್ಷದ ವಯಸ್ಸಿನಲ್ಲಿರುವ ವಯಸ್ಕರು ಕೂಡ ಯಾವುದೇ ಒಂದು ರೋಗಲಕ್ಷಣಗಳಿಲ್ಲದೆ ಬದುಕುತ್ತಿದ್ದಾರೆ. ಸಾಮಾಜಿಕವಾಗಿ ಯಾವುದೇ ಚಿಂತೆಯಿಲ್ಲದೆ ಈ ಬುಡಕಟ್ಟಿನಲ್ಲಿ ಝೀರೋ ಕ್ರೈಮ್ ದಾಖಲಾಗಿದೆ. ಆಹಾರ ಪದ್ಧತಿಯಿಂದ ಮತ್ತು ತಮ್ಮ ಸುದೀರ್ಘ ಬಾಳುವ ವಿಧಾನದಿಂದ ಮಾತ್ರವಲ್ಲ, ಯಾವುದೇ ಪ್ರಮಾಣದ ವ್ಯಾಜ್ಯವಿಲ್ಲದೆ, ಒತ್ತಡ ರಹಿತರಾಗಿ ಬಾಳುವುದು ಎನ್ನುವುದನ್ನು ಎಲ್ಲ ಸಮಾಜಗಳು ಈ ಹುಂಜಾ ಬುಡಕಟ್ಟಿನವರ ಬಳಿ ನಾವೆಲ್ಲರೂ ಕಲಿಯಬೇಕಿದೆ.

ಹುಂಜಾ ಸಮುದಾಯದ ಜನರು ಮೂರು ತಲೆಮಾರಿನ ಜನರು, ಅಂದರೆ ಅಜ್ಜಿ ಮಗಳು ಮೊಮ್ಮಗಳು ಹೀಗೆ ಎಲ್ಲರನ್ನೂ ಪಕ್ಕ ಪಕ್ಕ ನಿಲ್ಲಿಸಿ ನೋಡಿದರೆ ಎಲ್ಲರೂ ಅಕ್ಕ ತಂಗಿಯರಂತೆ ಕಾಣ್ತಾರೆ. ಅಷ್ಟರಮಟ್ಟಿಗೆ ಅವರ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆ ಬಲು ನಿಧಾನ. ಹುಂಜ ಸಮುದಾಯದವರು ಕೇವಲ ಆರೋಗ್ಯವಂತರು ಮತ್ತು ಆಯುಷ್ಯವಂತರು ಮಾತ್ರವಲ್ಲ, ಅವರು ಅಪ್ರತಿಮ ಸೌಂದರ್ಯ ವಂತರು. ಅಲ್ಲಿನ ಮಧ್ಯಮ ವಯಸ್ಸಿನ ಮಹಿಳೆ ಯಲ್ಲಿಯೂ ಕೂಡಾ ಓರ್ವ 18ರ ಯೌವನದ ಕಾಶ್ಮೀರೀ ಹುಡುಗಿಯ ಕಡು ಕಪ್ಪು ಕಣ್ಣುಗಳ ಆಕರ್ಷಣೆಯಿದೆ. ಆ ಸಮುದಾಯ ಅಷ್ಟರ ಮಟ್ಟಿಗೆ ಹೊರಜಗತ್ತನ್ನು ಸೆಳೆಯುತ್ತದೆ.

Leave A Reply

Your email address will not be published.