ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೀಡುವ ಗುಡು-ಗುಡು ಬೈಕ್ ಮಾರುಕಟ್ಟೆಗೆ!!

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಜಾಗ ಹೂಡಿದರೆ,ಇನ್ನೂ ಕೆಲವು ಬ್ರಾಂಡ್​ ಕಂಪನಿಗಳು ಎಲೆಕ್ಟ್ರಿಕ್​ ವಾಹನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.

ಇದೀಗ ಇದೆ ಸಾಲಿನಲ್ಲಿ ಯುವಕ- ಯುವತಿಯರ ಇಷ್ಟದ ರಾಯಲ್ ಎನ್‌ಫೀಲ್ಡ್ ಕೂಡ ಇಲೆಕ್ಟ್ರಿಕ್ ವಾಹನ ಆಗಿ ಬಿಡುಗಡೆಗೊಳ್ಳಲಿದೆ.ಜನಪ್ರಿಯ ಕಂಪನಿಗಳಲ್ಲಿ ಒಂದಾಗಿರುವ ಈ ರಾಯಲ್ ಎನ್‌ಫೀಲ್ಡ್ ಸದ್ಯ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದೆ.ಹೌದು.TVS, Hero, Ather ಮತ್ತು BMW ನಂತಹ ದೊಡ್ಡ ವಾಹನ ತಯಾರಕರು ಮುಂಬರುವ ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರ ಜೊತೆಗೆ ರಾಯಲ್ ಎನ್‌ಫೀಲ್ಡ್ ಕೂಡ ಈ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನು ನೀಡಲು ಸಜ್ಜಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆಗಸ್ಟ್ 2020 ರಲ್ಲಿ ರಾಯಲ್ ಎನ್‌ಫೀಲ್ಡ್ ಸಿಇಒ ವಿನೋದ್ ದಾಸರಿ ಅವರು ಐಷರ್ ಒಡೆತನದ ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು ದೃಢಪಡಿಸಿದರು. ಈ ಪ್ರಕಟಣೆಯ ನಂತರ, ಭಾರತೀಯ ಮೋಟಾರ್‌ಸೈಕಲ್ ತಯಾರಕರು 2020-21 ರ ವಾರ್ಷಿಕ ವರದಿಯಲ್ಲಿ ಕಂಪನಿಯು ಎಲೆಕ್ಟ್ರಿಕ್ ಶ್ರೇಣಿಯ ಬೈಕುಗಳಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.

ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಿಕ್ ಬೈಕ್‌ಗಳನ್ನು ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಗೆ ತಲುಪಿಸಲು ಉತ್ಪಾದನಾ ಮಾರ್ಗವನ್ನು ಸಿದ್ಧಪಡಿಸಲಾಗಿದೆ ಎಂದು ರಾಯಲ್ ಎನ್‌ಫೀಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ದೃಢಪಡಿಸಿದ್ದಾರೆ.

ಪರಿಸರ ಮತ್ತು ಜನರ ಭವಿಷ್ಯದ ಕಾಳಜಿಯ ಹೊರತಾಗಿ ಸರ್ಕಾರದ ದೂರದೃಷ್ಟಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಚೆನ್ನೈ ಮೂಲದ ಈ ಕಂಪನಿ ಚೆನ್ನೈ ಮೂಲದ ಈ ಕಂಪನಿ ಶೀಘ್ರದಲ್ಲೇ ಬೈಕ್‌ಗಳ ವಿದ್ಯುದ್ದೀಕರಣದ ಕೆಲಸವನ್ನು ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್‌ಗಳ ಮೂಲಮಾದರಿಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅವುಗಳ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು ಎಂದು ವಿನೋದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಯಲ್ ಎನ್‌ಫೀಲ್ಡ್ 2023 ರಲ್ಲಿ ಎಲ್ಲೋ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ.ಇವುಗಳ ನಿರಂತರ ಕೆಲಸಗಳು ನಡೆಯುತ್ತಿದ್ದು, ಸರಿಯಾದ ವಿಭಾಗದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತರಲು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.ವರದಿಗಳ ಪ್ರಕಾರ, ಬೈಕ್‌ನೊಂದಿಗೆ 8 ರಿಂದ 10 ಕಿಲೋವ್ಯಾಟ್-ಗಂಟೆಯ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತಿದ್ದು, ಇದು ಬಲವಾದ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಜ್ಜುಗೊಳ್ಳುತ್ತದೆ. ಪ್ರಸ್ತುತ ಮಾರುಕಟ್ಟೆಯ ಟ್ರೆಂಡ್‌ಗಳನ್ನು ಗಮನಿಸಿದರೆ, ಬೈಕ್‌ನ ಮೋಟಾರ್ 40 Bhp ಪವರ್ ಮತ್ತು 100 Nm ಪೀಕ್ ಟಾರ್ಕ್ ಆಗಿರುತ್ತದೆ ಎಂದು ತೋರುತ್ತದೆ.

error: Content is protected !!
Scroll to Top
%d bloggers like this: