ವಿದ್ಯಾರ್ಥಿಗಳೊಂದಿಗೆ ಸಖತ್ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ!

ಕೇರಳದ ಜಿಲ್ಲಾಧಿಕಾರಿಯೊಬ್ಬರು ಫ್ಲ್ಯಾಶ್ ಮಾಬ್ ನಲ್ಲಿ ಗುಂಪಿನೊಂದಿಗೆ ಸೇರಿಕೊಂಡು ಸಖತ್ ಸ್ಟೆಪ್ ಹಾಕಿ ಕುಣಿದಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋ ಹಂಚಲಾಗಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಆಗಿರುವ ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಫ್ಲ್ಯಾಷ್ ಮಾಬ್‌ನಲ್ಲಿ ವಿದ್ಯಾರ್ಥಿಗಳ ಗುಂಪಿನೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು, ಅವರ ಉತ್ಸಾಹಭರಿತ ಡ್ಯಾನ್ಸ್ ಎಲ್ಲರನ್ನು ಆಕರ್ಷಿಸಿದೆ.

ರಾಸ್ಲೀಲಾ ರಾಮ್-ಲೀಲಾದ ಜನಪ್ರಿಯ ಗೀತೆ ನಾಗಡೇ ಸಾಂಗ್ ಧೋಲ್‌ಗೆ ಅಯ್ಯರ್ ನೃತ್ಯ ಮಾಡಿದ್ದಾರೆ. ಸಂತೋಷದಿಂದ ಮತ್ತು ಗ್ರೇಸ್‌ಫುಲ್ ಆಗಿ ಅಯ್ಯರ್ ಅವರ ನೃತ್ಯ ಮಾಡಿದ್ದು ಸುತ್ತಲಿನ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ವಿಡಿಯೋವನ್ನು ಅಜಿನ್ ಪತ್ತನಂತಿಟ್ಟ ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಐಎಎಸ್ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ಕಲಾ ಉತ್ಸವದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿದ್ದ ಫ್ಲಾಶ್ ಮೊಬೈಲ್‌ನಲ್ಲಿ ನೃತ್ಯ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೀಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

error: Content is protected !!
Scroll to Top
%d bloggers like this: