ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!

ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು ಮತ್ತೊಂದು ಶಾಕ್ ನೀಡಿದೆ.

ಹೌದು ಈ ಅಧ್ಯಯನವೊಂದು ಪುರುಷರ ಆತಂಕವನ್ನು ಹೆಚ್ಚಿಸಿದೆ.ಬೇಸಿಗೆಯಲ್ಲಿ ರಾತ್ರಿ ಹೆಚ್ಚಾಗುವ ತಾಪಮಾನವು ಪುರುಷರಿಗೆ ಅಪಾಯಕಾರಿ ಎನ್ನಲಾಗಿದ್ದು,ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಬರುವ ಅಪಾಯ ಸುಮಾರು 4 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.ಅಧ್ಯಯನದ ಪ್ರಕಾರ, ಬೇಸಿಗೆ ರಾತ್ರಿಯಲ್ಲಿ ಹೆಚ್ಚಾಗುವ ತಾಪಮಾನ ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪುರುಷರಿಗೆ ಮಾತ್ರ ಇದು ಅಪಾಯಕಾರಿ. ಕಳೆದ ಕೆಲವು ವರ್ಷಗಳಲ್ಲಿ, ಹೆಚ್ಚುತ್ತಿರುವ ತಾಪಮಾನದಿಂದಾಗಿ, ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದು ಹೊಸ ಸಂಶೋಧನೆಯಲ್ಲಿ ಹೇಳಲಾಗಿದೆ.

ವಾಸ್ತವವಾಗಿ, ಶಾಖದ ಕಾರಣದಿಂದಾಗಿ ದೇಹದ ಉಷ್ಣತೆಯನ್ನು ಸಾಮಾನ್ಯ ತಾಪಮಾನದಲ್ಲಿ ಸ್ಥಿರವಾಗಿಡಲು ದೇಹದ ಚಯಾಪಚಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಹೃದಯದ ಮೇಲೆ ಭಾರವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ.ಹೀಗಾಗಿ ಹೃದ್ರೋಗಿಗಳು ಈ ಋತುವಿನಲ್ಲಿ ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಅಧ್ಯಯನದಲ್ಲಿ ಹೇಳಲಾಗಿದೆ.

ಬೇಸಿಗೆಯಲ್ಲಿ ಹೃದಯ ಸಂಬಂಧಿ ರೋಗಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಸಿಗೆಯಲ್ಲಿ ಹೆಚ್ಚಿನ ನೀರನ್ನು ಕುಡಿಯಬೇಕು.ವ್ಯಾಯಾಮ ಮಾಡಿದ ನಂತರ ಅರ್ಧಗಂಟೆ ಬಿಟ್ಟು ನೀರು ಕುಡಿಯುವುದು ಬಹಳ ಮುಖ್ಯ. ಚಹಾ ಮತ್ತು ಕಾಫಿಯಂತ ಕೆಫೀನ್ ಪಾನೀಯ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರದ ಬದಲಿಗೆ ಮಜ್ಜಿಗೆ, ಲಸ್ಸಿ ಮತ್ತು ಹಣ್ಣಿನ ರಸವನ್ನು ಕುಡಿಯಬೇಕು.ಉಪ್ಪನ್ನು ಕಡಿಮೆ ಸೇವಿಸಿ, ಆಹಾರದಲ್ಲಿ ರಸಭರಿತವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.ಮಧ್ಯಾಹ್ನ ಮನೆಯಿಂದ ಹೊರಗೆ ಕಾಲಿಡುವುದನ್ನು ತಪ್ಪಿಸಿ. ಮಧ್ಯಾಹ್ನ 11 ಗಂಟೆಯಿಂದ 4 ಗಂಟೆಯವರೆಗೆ ಆದಷ್ಟು ಮನೆಯಲ್ಲಿಯೇ ಇರಿ. ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸುತ್ತಿರಿ.

ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹಾಗೂ ಸಾವು 60 ರಿಂದ 65 ವರ್ಷ ವಯಸ್ಸಿನ ಪುರುಷರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಇದು ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ 15 ವರ್ಷಗಳಲ್ಲಿ ಯುಕೆಯಲ್ಲಿ ಹೃದ್ರೋಗದಿಂದ 40,000 ಸಾವು ಸಂಭವಿಸಿದೆ ಎಂಬುದು ಅಧ್ಯಯನದಿಂದ ಹೊರಬಂದಿದೆ. ಟೊರೊಂಟೊ ವಿಶ್ವವಿದ್ಯಾನಿಲಯದ ತಂಡವು 2001 ಮತ್ತು 2015 ರ ನಡುವೆ ಜೂನ್-ಜುಲೈನಲ್ಲಿ ಹೃದಯ ಕಾಯಿಲೆಗಳಿಂದ ಸಾವನ್ನಪ್ಪಿದ ಡೇಟಾವನ್ನು ಸಂಗ್ರಹಿಸಿದೆ.

Leave A Reply

Your email address will not be published.