‘ಮುಟ್ಟಿನ ಕಪ್’ ಗಳ ಮರುಬಳಕೆಯ ಮುನ್ನ ಸ್ವಚ್ಛತೆ ಹೇಗೆ? ಇಲ್ಲಿದೆ ಡಿಟೇಲ್ಸ್!!!

0 16

ಹೆಣ್ಣಿಗೆ ‘ಮುಟ್ಟು’ ಒಂದು ವರದಾನವಿದ್ದಂತೆ. ಹೆಣ್ಣು ಮೈ ನೆರೆದರೆನೇ ಆಕೆ ಮಕ್ಕಳನ್ನು ಹೆರಲು ಸಾಧ್ಯ. ಹಾಗಾಗಿ ಈ ಸಂದರ್ಭವನ್ನು ಭಾರತದ ಕೆಲವು ಕಡೆ ಯಾವುದೇ ಮದುವೆಗಿಂತಲೂ ಕಡಿಮೆ ಇಲ್ಲದೆ ಹಾಗೇ ಆಚರಣೆ ಮಾಡುತ್ತಾರೆ. ಆದರೆ ಈಗ ನಾವು ಇಲ್ಲಿ ಹೇಳ ಹೊರಟಿರೋದು ಮುಟ್ಟಿನ ಸಮಯದಲ್ಲಿ ಬಳಸುವ ವಸ್ತುಗಳ ಬಗ್ಗೆ.

ಹಿಂದಿನ ಕಾಲದಲ್ಲಿ ಸುರಕ್ಷತೆಗಾಗಿ ಬಟ್ಟೆಗಳನ್ನು ಬಳಸುತ್ತಿದ್ದರು, ಕಾಲ ಬದಲಾದಂತೆ ಕಾಟನ್ ಪ್ಯಾಡ್‌ಗಳು ಬಳಕೆಗೆ ಬಂದಿತು. ಈಗ ಮುಂದುವರೆದ ಭಾಗವಾಗಿ ಮುಟ್ಟಿನ ಕಪ್ಪುಗಳು ಅಥವಾ ಮೆನುಸ್ಟ್ರುವಲ್ ಕಪ್ ಗಳ ಬಳಕೆಯಲ್ಲಿವೆ. ಮುಟ್ಟಿನ ಕಪ್ ಮಹಿಳೆಯರ ಪಾಲಿನ ಉತ್ತಮ ಸ್ನೇಹಿತೆ ಎಂದೇ ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಟ್ಟೆ, ಪ್ಯಾಡ್‌ಗಳಿಗಿಂತ ಹೆಚ್ಚು ರಕ್ತವನ್ನು ಹೀರಿಕೊಳ್ಳುವ ಸಾಮರ್ಥ್ಯ ಈ ಮುಟ್ಟಿನ ಕಪ್‌ಗಳಲ್ಲಿರುತ್ತದೆ. ಹೀಗಾಗಿಯೇ ಅತೀ ಹೆಚ್ಚು ಮಹಿಳೆಯರು ಮುಟ್ಟಿನ ಕಪ್‌ ಬಳಸುತ್ತಾರೆ. ಆದರೆ ಅದರ ಸ್ವಚ್ಛತೆಯ ಬಗ್ಗೆಯೂ ಅಷ್ಟೇ ಗಮನಹರಿಸುವುದು ಮುಖ್ಯವಾಗಿದೆ. ಹೀಗಾಗಿ ಸ್ವಚ್ಚಗೊಳಿಸುವ ಬಗ್ಗೆ ಸರಿಯಾದ ರೀತಿ ತಿಳಿದಿರಬೇಕು. ಇಲ್ಲವಾದರೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ನಿಮ್ಮ ಮುಟ್ಟಿನ ಕಪ್ ಅನ್ನು ತೊಳೆಯಲು ನೀರು ಅಥವಾ ಒರೆಸುವ ಬಟ್ಟೆಗಳು ಇಲ್ಲದಿದ್ದರೆ, ಅಂತಹ ಸಂದರ್ಭಗಳಲ್ಲಿ ನೀವು ಟಾಯ್ಲೆಟ್ ಪೇಪರ್ ಅನ್ನು ಬಳಸಬಹುದು. ಒಂದು ವೇಳೆ ಟಯ್ಲೆಟ್ ಪೇಪರ್ ಇಲ್ಲದಿದ್ದರೆ ಅದರ ಬದಲಿಗೆ ಪೇಪರ್ ಟವೆಲ್ ಅನ್ನು ಸಹ ಉಪಯೋಗಿಸಬಹುದು.

5 ರಿಂದ 10 ನಿಮಿಷಗಳ ಕಾಲ
ಬಿಸಿ ನೀರಿನಲ್ಲಿ ಮುಟ್ಟಿನ ಕಪ್‌ಗಳನ್ನು ನೆನೆಸಿಟ್ಟರೆ, ಅದರಲ್ಲಿರುವ ಕೊಳೆಗಳು ಸ್ವಚ್ಛವಾಗುತ್ತದೆ. ನಂತರ ಬಿಸಿ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿಕೊಳ್ಳಿ.

ಮುಟ್ಟಿನ ಕಪ್‌ಗಳನ್ನು ಬಿಸಿ ನೀರಿನಲ್ಲಿ ಹಾಕಿದ ನಂತರವೂ ಕೊಳೆ ಇದ್ದರೆ ಟೂತ್‌ಬ್ರಷ್‌ನಿಂದ ಸ್ವಚ್ಛಗೊಳಿಸಿ. ನೀವು ಬಳಸುವ ಟೂತ್‌ಬ್ರಷ್‌ಗಳ ಬಳಕೆ ಮಾಡಬೇಡಿ. ಅದೇ ರೀತಿ ಒಂದು ಬಾರಿ ಕಪ್ ತೊಳೆಯಲು ಬಳಸಿದ ಬ್ರಷ್‌ಗಳನ್ನು ಎಂದೂ ಬೇರೆ ವಸ್ತುಗಳ ಕ್ಲೀನ್ ಮಾಡಲು ಬಳಸಬೇಡಿ.
ಸೋಪ್‌ನಲ್ಲಿ ಮುಟ್ಟಿನ ಕಪ್‌ಗಳನ್ನು ತೊಳೆಯಬೇಡಿ.
ವಿನೆಗರ್ ಅಥವಾ ಅಡುಗೆ ಸೋಡಾ ಬಳಸಿ ಮೆನಸ್ಟ್ರು ವಲ್ ಕಪ್‌ ಅನ್ನು ಕ್ಲೀನ್ ಮಾಡಬೇಡಿ. ಪಾತ್ರೆ ತೊಳೆಯುವ ಸೋಪ್ ಅಥವಾ ದ್ರವದಲ್ಲಿ ಮುಟ್ಟಿನ ಕಪ್‌ ತೊಳೆಯಬೇಡಿ.

ಮುಟ್ಟಿನ ಕಪ್‌ಗಳನ್ನು ಸಿಲಿಕಾನ್‌ನಿಂದ ತಯಾರಿಸಲಾಗುತ್ತದೆ. ಕೆಲವರಿಗೆ ಸಿಲಿಕಾನ್ ಚರ್ಮಕ್ಕೆ ಅಲರ್ಜಿಯನ್ನು ಉಂಟು ಮಾಡುತ್ತದೆ. ಅಲರ್ಜಿ ಸಮಸ್ಯೆ ಇರುವವರು ಈ ಕಪ್‌ಗಳನ್ನು ಬಳಸಬೇಡಿ. ಯೋನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಮುಟ್ಟಿನ ಕಪ್‌ಗಳನ್ನು ಬಳಸಬೇಡಿ. ಕನಿಷ್ಠ ಆರು ವಾರಗಳವರೆಗೆ ಮುಟ್ಟಿನ ಕಪ್‌ಗಳ ಬಳಕೆ ಬೇಡ. ಅದರ ನಂತರ ಬಳಸಲು ವೈದ್ಯರ ಸಲಹೆ ಪಡೆದುಕೊಳ್ಳಿ. ಈ ಕಪ್‌ಗಳನ್ನು ಧರಿಸಿದಾಗ ಅಸಹಜತೆ ಕಾಡಿದರೆ ಅಂತಹ ಸಂದರ್ಭಗಳಲ್ಲಿ ಬಳಸಬೇಡಿ.

Leave A Reply