ಕಡಬ: ಪಾಲೋಲಿ ಹೊಳೆಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು!! ಸ್ನೇಹಿತರೊಂದಿಗೆ ಈಜಾಡಲು ನೀರಿಗಿಳಿದಿದ್ದ ವೇಳೆ ನಡೆದ ದುರಂತ

ಇಲ್ಲಿನ ಪಿಜಕ್ಕಳ ಎಂಬಲ್ಲಿನ ಪಾಲೋಲಿ ಹೊಳೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಏಪ್ರಿಲ್ 03 ರ ಅಪರಾಹ್ನ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ನರಿಮೊಗರು ಐಟಿಐ ನ ವಿದ್ಯಾರ್ಥಿ, ಕಡಬ ಕಾಲೇಜು ಸಮೀಪದ ನಾವೂರ ಎಂಬವರ ಪುತ್ರ ನಿತೇಶ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರ ಜೊತೆಗೂಡಿ ನದಿಯಲ್ಲಿ ನೀರಿಗಿಳಿದಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.