ಮಂಗಳೂರು : ಆಶ್ರಮದಲ್ಲಿದ್ದ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ, ಆಸಿಫ್ ಆಪತ್ಭಾಂಧವ ಸೇರಿ ಮೂವರ ವಿರುದ್ಧ ಎಫ್ ಐ ಆರ್ ದಾಖಲು

ಮಂಗಳೂರು : ತನ್ನ ಆಶ್ರಮದಲ್ಲಿರುವ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಭಾಂಧವ ಸೇರಿ ಮೂವರ ವಿರುದ್ಧ ಮಂಗಳೂರು ಮಹಿಳಾ‌ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮೊಹಮ್ಮದ್ ಆಸೀಫ್ ( 39), ಶಿವಂ ಯಾನೆ ಶಿವಲಿಂಗ ( 40) ಹಾಗೂ ಮೊಹಮ್ಮದ್ ಆಫ್ತಾಬ್ (32) ಆರೋಪಿತರು.

ವನಜ ಎಂಬುವವರು ಶಿವಮೊಗ್ಗ ಮೂಲದವರಾಗಿದ್ದಾರೆ. ಮಂಗಳೂರಿನಲ್ಲಿ 20 ವರ್ಷದಿಂದ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗ ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ, ಬಾಡಿಗೆ ಕಟ್ಟಲು ಪರಿಸ್ಥಿತಿಯಲ್ಲಿದ್ದಾಗ, ಶಿವಂ ಎಂಬ ಸಾಮಾಜಿಕ ಕಾರ್ಯಕರ್ತ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದರು. ಈ ವೇಳೆ ಶಿವಂ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಭಾಂಧವ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಸೀಫ್ ಆಪತ್ಭಾಂಧವ ಮೈಮುನಾ ಫೌಂಡೇಶನ್ ನ ಪಾಲುದಾರ ಕೂಡಾ.

ನಂತರ ವನಜ ಅವರು ಮೂಲ್ಕಿಯ ಮೈಮುನಾ ಪೌಂಡೇಶನ್ ನ ಆಶ್ರಮಕ್ಕೆ ಸೇರಿಸಿದ್ದಾರೆ. ಇದೇ ವೇಳೆ ಫೌಂಡೇಶನ್ ನ ವಾರ್ಡನ್ ಕಮ್ ಮ್ಯಾನೇಜರ್ ಶಶಿಧರ್ ಗೋಲ್ ಮಾಲ್ ಮಾಡಿ ಪರಾರಿಯಾಗಿದ್ದಾನೆ.

ಈ ಗೋಲ್ ಮಾಲ್ ನಲ್ಲಿ ವನಜಾ ಭಾಗಿಯಾಗಿದ್ದಾಳೆಂದು ಅನುಮಾನದ ಮೇಲೆ ಆಕೆಯ ಬಳಿ ಇದ್ದ ಮೊಬೈಲ್ ಫೋನ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಎಲ್ಲವನ್ನೂ ಕಸಿದುಕೊಂಡು ವಿಕೆಟ್ ಮತ್ತು ಬೆಲ್ಟಿನಿಂದ ಹೊಡೆದು ಎಡಕೈ ಮುರಿದಿದ್ದಾರೆ.

ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಡಾಕ್ಟರ್ ಬಳಿ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದೇನೆಂದು ಸುಳ್ಳು ಹೇಳಿಸಿ ಬ್ಯಾಂಡೇಜ್ ಹಾಕಿ ಆಶ್ರಮಕ್ಕೆ ಕರೆದುಕೊಂಡು ಬಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂಬ ಆರೋಪ ಇದೆ.

ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣಕ್ಕೆ ದಾಖಲಾಗಿದೆ.

Leave A Reply

Your email address will not be published.