ಯುಗಾದಿ ಮತ್ತು ಸಂವತ್ಸರಗಳ ಬಗ್ಗೆ ತಿಳಿದುಕೊಳ್ಳಿ ಮಹತ್ವದ ಮಾಹಿತಿ

ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು ೬೦ ಸಂವತ್ಸರಗಳಿವೆ.

ಒಂದು ಜೋವಿಯನ್ ವರ್ಷವನ್ನು ಭಾರತೀಯ ಕ್ಯಾಲೆಂಡರ್‌ಗಳಲ್ಲಿ ಬೃಹಸ್ಪತಿ(ಗುರು) ಎಂದು ವ್ಯಾಖ್ಯಾನಿಸಲಾಗಿದ್ದು, ಅದು ಒಂದು ನಕ್ಷತ್ರಪುಂಜದಿಂದ ಮುಂದಿನ ನಕ್ಷತ್ರಕ್ಕೆ ಸಾಗಲು ತೆಗೆದುಕೊಳ್ಳುವ ಸರಾಸರಿ ಚಲನೆಯ ಸಮಯವಾಗಿದೆ.
ಯುಗಾದಿ ಎಂದರೆ ಯುಗದ ಆರಂಭ ಎಂದರ್ಥ. ಯುಗ ಎನ್ನುವ ಶಬ್ದಕ್ಕೆ ನೊಗ, ಜೋಡಿಯ ಪದಾರ್ಥ, ಕಾಲ ವಿಶೇಷ – ಹೀಗೆ ಮೂರು ಪ್ರಸಿದ್ಧ ಅರ್ಥಗಳಿವೆ ಎನ್ನಲಾಗಿದೆ. ಸಂವತ್ಸರ ಎಂದರೆ ವರ್ಷ. ಋುತುಗಳು ಬದಲಾಗುವ ಸಮಯ. ಋುತುಗಳ ರಾಜನಾದ ವಸಂತನು ಬರುವ ಕಾಲಕ್ಕೇ ಹೊಸ ಸಂವತ್ಸರದ ಆರಂಭವೂ ಆಗುವುದು. ಇಂದು ಶುಭಕೃತ್‌ ನಾಮ ಸಂವತ್ಸರ ಯುಗಾದಿ.‌ಇಂದಿನಿಂದ ಶುಭಕೃತ್‌ ನಾಮ ಸಂವತ್ಸರ ಪ್ರಾರಂಭ. ಶುಭಕೃತ್‌ ಎಂದರೆ ಶುಭವನ್ನು ತರುವಂತಹದು. ಹೆಸರಲ್ಲೇ ಮಂಗಲಕರವಿರುವುದು ಹೆಚ್ಚು ಸಮಾಧಾನಕರ.

ಯುಗಾದಿಯಲ್ಲಿ ಮುಖ್ಯವಾಗಿ ಎರಡು ಪ್ರಬೇಧಗಳು. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿಯೆಂದೂ, ಸೂರ್ಯನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಸೌರಮಾನ ಯುಗಾದಿಯೆಂದೂ ಕರೆಯುತ್ತಾರೆ. ಕರ್ನಾಟಕದಲ್ಲಿ ಕೇರಳದ ಗಡಿಭಾಗವನ್ನು ಹೊರತುಪಡಿಸಿ ಬಹುತೇಕ ಎಲ್ಲೆಡೆ ಚಾಂದ್ರಮಾನ ಪದ್ಧತಿಯೇ ಮೊದಲಿನಿಂದಲೂ ರೂಢಿಯಲ್ಲಿದೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಶುಕ್ಲದ ಪಾಡ್ಯ(ಪ್ರಥಮ)ದಂದು. ಮೇಷರಾಶಿಯ ಸಂಕ್ರಮಣದಂದು ಸೌರಮಾನ

ಸಂವತ್ಸರಗಳ ವಿವರ ;

  1. ಪ್ರಭವ
  2. ವಿಭವ
  3. ಶುಕ್ಲ
  4. ಪ್ರಮೋದೂತ
  5. ಪ್ರಜೋತ್ಪತ್ತಿ
  6. ಆಂಗೀರಸ
  7. ಶ್ರೀಮುಖ
  8. ಭಾವ
  9. ಯುವ
  10. ಧಾತ್ರಿ
  11. ಈಶ್ವರ
  12. ಬಹುಧಾನ್ಯ
  13. ಪ್ರಮಾಥಿ
  14. ವಿಕ್ರಮ
  15. ವೃಷ/ ವಿಷು
  16. ಚಿತ್ರಭಾನು
  17. ಸ್ವಭಾನು
  18. ತಾರಣ
  19. ಪಾರ್ಥಿವ
  20. ವ್ಯಯ
  21. ಸರ್ವಜಿತ್
  22. ಸರ್ವಧಾರಿ
  23. ವಿರೋಧಿ
  24. ವಿಕೃತ
  25. ಖರ
  26. ನಂದನ
  27. ವಿಜಯ
  28. ಜಯ
  29. ಮನ್ಮಥ
  30. ದುರ್ಮುಖಿ
  31. ಹೇವಿಳಂಬಿ
  32. ವಿಳಂಬಿ
  33. ವಿಕಾರಿ
  34. ಶಾರ್ವರಿ
  35. ಪ್ಲವ
  36. ಶುಭಕೃತ್
  37. ಶೋಭಾಕೃತ್
  38. ಕ್ರೋಧಿ
  39. ವಿಶ್ವಾವಸು
  40. ಪರಾಭವ
  41. ಪ್ಲವಂಗ
  42. ಕೀಲಕ
  43. ಸೌಮ್ಯ
  44. ಸಾಧಾರಣ
  45. ವಿರೋಧಿಕೃತ್
  46. ಪರಿಧಾವಿ
  47. ಪ್ರಮಾದೀ
  48. ಆನಂದ
  49. ರಾಕ್ಷಸ
  50. ನಳ
  51. ಪಿಂಗಳ
  52. ಕಾಳಯುಕ್ತಿ
  53. ಸಿದ್ಧಾರ್ಥಿ
  54. ರುದ್ರ / ರೌದ್ರಿ
  55. ದುರ್ಮತಿ
  56. ದುಂದುಭಿ
  57. ರುಧಿರೋದ್ಗಾರಿ
  58. ರಕ್ತಾಕ್ಷಿ
  59. ಕ್ರೋಧನ
  60. ಅಕ್ಷಯ/ಕ್ಷಯ
Leave A Reply

Your email address will not be published.