ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿ ಓಡಾಟ | ಸತ್ಯಾಸತ್ಯತೆ ಏನು ?

ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿಯೊಂದು ಸಂಚರಿಸುತ್ತಿದೆ ಹಾಗೂ ಜನ ಎಚ್ಚರಿಕೆಯಿಂದ ಇರಬೇಕು ಎಂಬ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ ಘಟನೆ ನಡೆದಿದೆ.

ಸುರತ್ಕಲ್ ಹೊರವಲಯದ ಸೂರಿಂಜೆ ಕಿನ್ನಿಗೋಳಿ ರಸ್ತೆಯ ಶಿಬರೂರು ಬಳಿ ಹುಲಿ ಇರುವುದನ್ನು ನೋಡಿದ್ದೇವೆ, ಹಾಗಾಗಿ ಆ ಜಾಗದಲ್ಲಿ ಸಂಚರಿಸುವಾಗ ಜಾಗೃತೆಯಿಂದ ಇರಬೇಕು ಎಂಬ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಜೊತೆಗೆ ಹುಲಿಯೊಂದು ಓಡಾಡುವ ವೀಡಿಯೋ ತುಣುಕನ್ನು ಕೂಡಾ ಹಾಕಲಾಗಿತ್ತು.

ಬಳಿಕ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹುಲಿ ಇರುವುದು ಸುಳ್ಳು ಎಂಬ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.