ಭಯೋತ್ಪಾದಕರ ಪಟ್ಟಿಯಲ್ಲಿ ಭಾರತೀಯರ ಹೆಸರು : ಸೌದಿ ಅರೇಬಿಯಾ ಹೇಳಿಕೆ

25 ಮಂದಿ ಭಯೋತ್ಪಾದಕರ ಪಟ್ಟಿಯನ್ನು ಸೌದಿ ಅರೇಬಿಯಾ ಗುರುವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಇಬ್ಬರು ಭಾರತೀಯರ ಹೆಸರು ಸೇರ್ಪಡೆಯಾಗಿದೆ. ಪಟ್ಟಿಯಲ್ಲಿರುವ ಭಾರತೀಯರನ್ನು ಚಿರಂಜೀವ್ ಕುಮಾರ್ ಸಿಂಗ್ ಮತ್ತು ಮನೋಜ್ ಸಬರ್ವಾಲ್’ ಎಂದು ಗುರುತಿಸಲಾಗಿದೆ.

ಯೆಮನ್ ಮೂಲದ ಹೌದಿ ಭಯೋತ್ಪಾದಕ ಸಂಘಟನೆ ಪರವಾಗಿ ಐಆರ್‌ಜಿಸಿ ಕ್ಯೂಎಫ್‌ನ ಸಹಾಯದೊಂದಿಗೆ ಹಣದ ನೆರವು ಒದಗಿಸಲು ಸಹಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯದಲ್ಲಿ ಭಾಗಿಯಾದ 25 ಮಂದಿಯನ್ನು ಸೌದಿಯು ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ ಎಂಬುದಾಗಿ ಸೌದಿ ಅರೇಬಿಯಾದಲ್ಲಿನ ಪ್ರೆಸಿಡೆನ್ಸಿ ಆಫ್ ಸ್ಟೇಟ್ ಸೆಕ್ಯುರಿಟಿ ಹೇಳಿಕೆ ಬಿಡುಗಡೆ ಮಾಡಿದೆ ಎಂಬುದಾಗಿ ವರದಿಗಳು ತಿಳಿಸಿವೆ.


Ad Widget

Ad Widget

Ad Widget

ವರದಿಯೊಂದರ ಪ್ರಕಾರ ಮ್ಯಾರಿಟೈಮ್ ಶಿಪ್ಪಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಮನೋಜ್ ಸಬರ್ವಾಲ್ ಹೆಸರು ಇರಾನ್‌ನಲ್ಲಿ ಕಳ್ಳಸಾಗಣೆದಾರರ ಪಟ್ಟಿಯಲ್ಲೂ ಇತ್ತು.. ಚಿರಂಜೀವ್ ಕುಮಾರ್ ಸಿಂಗ್ ಔರಮ್ ಶಿಪ್ ಮ್ಯಾನೇಜ್ಮೆಂಟ್ ಶಿಪ್ ಪ್ರೀಝೋನ್ ಕಂಪನಿಯ ನಿರ್ದೇಶಕರಾಗಿದ್ದರು ಎಂದು ವರದಿಗಳು ತಿಳಿಸಿವೆ.

Leave a Reply

error: Content is protected !!
Scroll to Top
%d bloggers like this: