ಇನ್ನು ಮುಂದೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 10 ದಿನಗಳ ಯೋಗ ತರಬೇತಿ ಕಡ್ಡಾಯ; ರಾಷ್ಟ್ರೀಯ ವೈದ್ಯಕೀಯ ಮಂಡಳಿಯಿಂದ ಸುತ್ತೋಲೆ

ಎಲ್ಲ ರಾಜ್ಯಗಳ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ( ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕಾಲೇಜು ಆಸ್ಪತ್ರೆಗಳು) 10 ದಿನಗಳ ಯೋಗ ತರಬೇತಿಯನ್ನು ಕಡ್ಡಾಯ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ(NMC) ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಅಂದರೆ ಪ್ರತಿವರ್ಷ ಜೂನ್ 12ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 1 ತಾಸುಗಳ ಕಾಲವಾದರೂ ಎಂಬಿಬಿಎಸ್ಎನ ಎಲ್ಲ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ ಎಂದು ಎನ್ಎಂಸಿ ಹೇಳಿದೆ.

ಅಷ್ಟು ಮಾತ್ರವಲ್ಲದೇ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 2026ರಲ್ಲಿ ಮೊದಲ ರಾಷ್ಟ್ರವ್ಯಾಪಿ ನಿರ್ಗಮನ ಪರೀಕ್ಷೆ (Exit Exam) ನಡೆಸುವುದಾಗಿಯೂ ಇದೇ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ನಿರ್ಗಮನ ಪರೀಕ್ಷೆಯೆಂದರೆ, ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ಅವರು ಪಡೆದ ಅಂಕಗಳ ಆಧಾರದ ಮೇಲೆ ಮಾಡಲು ಇಚ್ಛಿಸುವ ವೈದ್ಯಕೀಯ ಅಭ್ಯಾಸಗಳಿಗೆ ಪರವಾನಗಿ ನೀಡುವ ಕ್ರಮ. ಈ ಪರೀಕ್ಷೆ ಬರೆದೇ ಅವರು ಮುಂದಿನ ಸ್ನಾತಕೋತ್ತರ ಹಂತಕ್ಕೆ ಹೋಗಬೇಕಾಗುತ್ತದೆ.

ಎನ್ ಎಂಸಿಯು ದೇಶದ ಎಲ್ಲಾ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವಂತೆ ಹೇಳಿದೆ. ರಾಷ್ಟ್ರವ್ಯಾಪಿಯಾಗಿ ಒಂದು ಸಾಮಾನ್ಯ ಸ್ವರೂಪದ ಯೋಗದ ವಿಧವನ್ನು ನೀಡಲಿದೆ. ಆದರೂ ವೈದ್ಯಕೀಯ ಕಾಲೇಜುಗಳು ಸ್ವಂತವಾಗಿಯೇ ಆಯ್ಕೆ ಮಾಡಿಕೊಳ್ಳಬಹುದು. ಯೋಗಾಭ್ಯಾಸಕ್ಕಾಗಿಯೇ ಒಂದು ಘಟಕವನ್ನು ರಚಿಸಿಕೊಳ್ಳಬೇಕು. ನುರಿತರಿಂದ ತರಬೇತಿ ಕೊಡಿಸಬೇಕು ಎಂದೂ ವೈದ್ಯಕೀಯ ಮಂಡಳಿ ಹೇಳಿದೆ.

Leave A Reply

Your email address will not be published.