ಬಾತ್ ರೂಂ ನಲ್ಲಿ ಮೊಬೈಲ್ ಇಟ್ಟು ಶಿಕ್ಷಕಿಯ ಖಾಸಗಿ ದೃಶ್ಯ ವೀಡಿಯೋ ಮಾಡಿದ 16ರ ಹರೆಯದ ವಿದ್ಯಾರ್ಥಿ !!!

ವಿದ್ಯೆ ಕಲಿಸೋ ಗುರುವಿನ ಮೇಲೆಯೇ ಇಲ್ಲೊಬ್ಬ ವಿದ್ಯಾರ್ಥಿ ಕಾಮದ ದೃಷ್ಟಿ ಹಾಕಿದ್ದಾನೆ.

ವಿದ್ಯಾರ್ಥಿಗೆ ಪಾಠ ಹೇಳಲು ಮನೆಗೆ ಬಂದ ಶಿಕ್ಷಕಿ ( 56ವರ್ಷ) ಬಾತ್ ರೂಂ ಗೆ ಹೋಗಿದ್ದ ಸಂದರ್ಭದಲ್ಲಿ ಮೊಬೈಲ್ ಮೂಲಕ ದೃಶ್ಯ ಸೆರೆಹಿಡಿದಿದ್ದಾನೆ. ಶಿಕ್ಷಕಿ ಸುಮಾರು 5 ವರ್ಷದಿಂದ ವಿದ್ಯಾರ್ಥಿಯ ಮನೆಗೆ ಬಂದು ಪಾಠ ಹೇಳಿ ಕೊಡುವ ಕೆಲಸ ಮಾಡುತ್ತಿದ್ದರು.

ಈ ಘಟನೆ ಪುಣೆಯ ಅಲಂಕಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ 16 ರ ಹರೆಯದ ಅಪ್ರಾಪ್ತ ವಿದ್ಯಾರ್ಥಿ ಮೊಬೈಲ್ ನ್ನು ವಾಶ್ ರೂಂ ನಲ್ಲಿ ಇಟ್ಟು ಬಂದಿದ್ದಾನೆ. ಇದರ ಅರಿವಿಲ್ಲದ ಶಿಕ್ಷಕಿ ಬಾತ್ ರೂಂ ಬಳಕೆ ಮಾಡಿ ಹೊರ ಬಂದಿದ್ದಾರೆ. ಶಿಕ್ಷಕಿಯ ಖಾಸಗಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿದ್ಯಾರ್ಥಿ ಮನೆಯಲ್ಲಿ ಶಿಕ್ಷಕಿ ಪಾಠ ಮಾಡುವ ಸಂದರ್ಭದಲ್ಲಿಯೂ ಆಕೆಯ ಎದೆಯ ವೀಡಿಯೋವನ್ನು ಸಹ ಸೆರೆ ಹಿಡಿದಿದ್ದಾನೆ.

ಈ ವಿಷಯ ತಿಳಿದ ಶಿಕ್ಷಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Leave A Reply

Your email address will not be published.