ವಜ್ರ ಧರಿಸುವುದರಿಂದ ಆಗುವ ಅಡ್ಡಪರಿಣಾಮಗಳು ಯಾವುವು ? ಈ ಸಮಸ್ಯೆಗಳು ಕಂಡು ಬಂದರೆ ವಜ್ರ ಧರಿಸಲೇಬೇಡಿ!

‘ವಜ್ರ’ ಯಾರಿಗೆ ಗೊತ್ತಿಲ್ಲ ಹೇಳಿ?
ವಜ್ರವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..?

ಯಾರಿಗಾದರೂ ವಜ್ರ ಸಿಕ್ಕಿದೆ ಎಂದರೆ, ಹೃದಯವೇ ಒಡೆದು ಹೋದಂತೆ ಜನರು ಪ್ರತಿಕ್ರಿಯೆ ನೀಡುತ್ತಾರೆ. ವಿಶ್ವದಲ್ಲಿ ಸಾಕಷ್ಟು ಹೆಸರು ಮಾಡಿರುವ ಗ್ರೇಟ್ ಮುಘಲ್, ಕೊಹಿನೂರ್, ರೀಜೆಂಟ್, ಫ್ಲೋರೆಂಟೈನ್, ದರಿಯಾ-ಇ-ನೂರ್, ಪಿಗೋಟ್, ಟಾವೆರ್ನಿಯರ್ ಮತ್ತು ನಸಾಕ್ ವಜ್ರಗಳು ಭಾರತದಲ್ಲಿಯೇ ಸೃಷ್ಟಿಗೊಂಡ ವಜ್ರಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ವಜ್ರ ಶ್ರೀಮಂತರ ಪಾಲಾಗಿದ್ದು, ವಜ್ರವಿದ್ದ ವ್ಯಕ್ತಿ ಕೋಟ್ಯಾಧಿಪತಿಗಳೆಂದೇ ಹೇಳಲಾಗುತ್ತದೆ. ಇಂದು ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಮೊದಲ ಆಯ್ಕೆ ವಜ್ರವಾಗಿರುತ್ತದೆ.

ರತ್ನಗಳಲ್ಲಿ ಅತ್ಯಂತ ಸುಂದರವಾದ ಹೊಳೆಯುವ ರತ್ನವೆಂದರೆ ವಜ್ರ.
ಕೆಲವು ರಾಶಿಯವರು ಮಾತ್ರ ವಜ್ರವನ್ನು ಧರಿಸಬಹುದು. ವಜ್ರವು ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವಗಳನ್ನು ಹೊಂದಿರುತ್ತದೆ. ಹಾಗಾಗಿ ವಜ್ರವನ್ನು ಯಾರು ಧರಿಸಬೇಕು, ಧರಿಸಿದರೂ ಈ ವಜ್ರದಿಂದ ಉಂಟಾಗುವ ಸಮಸ್ಯೆಗಳನ್ನು ಹೇಗೆ ಕಂಡು ಹಿಡಿಯಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಮಹಿಳೆಯರು ರಾಶಿಯನ್ನು ಆಧರಿಸಿ ಧರಿಸಬಾರದು. ಸೌಂದರ್ಯದ ಉದ್ದೇಶಕ್ಕಾಗಿ ಮಾತ್ರ ಧರಿಸಬೇಕು. ವಜ್ರವು ಲೈಂಗಿಕ ಅಸ್ವಸ್ಥತೆಗಳು, ಬಂಜೆತನ, ವೀರ್ಯ ಸಮಸ್ಯೆಗಳು, ಲೈಂಗಿಕ ಬಯಕೆ ಸಮಸ್ಯೆಗಳು, ಕರುಳಿನ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ. ಕಣ್ಣುಗಳು, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಇತ್ಯಾದಿಗಳಿಗೂ ಪರಿಹಾರ ನೀಡುತ್ತದೆ. ವಜ್ರವನ್ನು ಬೆಳ್ಳಿ ಅಥವಾ ಬಿಳಿ ಚಿನ್ನ ಮತ್ತು ಪ್ಲಾಟಿನಂನಂತಹ ಯಾವುದೇ ಬಿಳಿ ಲೋಹದ ಮಿಶ್ರಲೋಹದಲ್ಲಿ ಧರಿಸಬೇಕು. ಶುಕ್ರವಾರದಂದು ಮಧ್ಯದ ಬೆರಳಿಗೆ ವಜ್ರವನ್ನು ಧರಿಸಬೇಕು. ಉತ್ತಮ ಫಲಿತಾಂಶಗಳಿಗಾಗಿ ವಜ್ರವನ್ನು ಸರಿಯಾಗಿ ಸಕ್ರಿಯಗೊಳಿಸಬೇಕು, ಶಕ್ತಿಯುತಗೊಳಿಸಬೇಕು ಮತ್ತು ಶುದ್ದೀಕರಿಸಬೇಕು.

ವಜ್ರವು ನಿಮಗೆ ಆಗಿ ಬರದಿದ್ದಲ್ಲಿ ಕಂಡುಬರುವ ಮೊದಲ ಸೂಚನೆ ಏನೆಂದರೆ, ನೀವು ನಿಮ್ಮ ಸಂಗಾತಿಯ ಮೇಲೆ ಇರುವ ಆಕರ್ಷಣೆ ಕಳೆದುಕೊಳ್ಳುವುದು ಅಥವಾ, ನಿಮ್ಮ ಪ್ರೇಮಿಯೊಂದಿಗೆ ಸಮಸ್ಯೆಗಳನ್ನು ಅನುಭವಿಸಬಹುದು.

ವಜ್ರವು ನಿಮಗೆ ಆಗದಿದ್ದರೆ, ನೀವು ರಾತ್ರಿ ನಿದ್ರೆ ಬರುವುದಿಲ್ಲ. ದುಃಸ್ವಪ್ನಗಳು ಕಾಡುತ್ತದೆ. ಅತಿ ಆಯಾಸಗೊಳ್ಳುವಿಕೆ ಕಾಡುತ್ತದೆ.

ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಏರುತ್ತದೆ. ಇದರಿಂದ ಇತರ ಆರೋಗ್ಯ ಸಮಸ್ಯೆಗಳೂ ಉಲ್ಬಣಗೊಳ್ಳಬಹುದು.

ಹಾರ್ಮೋನುಗಳ ಅಸಮತೋಲನ, ಮುಖದ ಮೇಲಿನ ಮೊಡವೆ ಮತ್ತು ಕಲೆಗಳು, ಚರ್ಮವು ಬಿಳಿಯಾಗುವುದು ಮತ್ತು ಕೂದಲು ಉದುರುವಿಕೆ ಉಂಟಾಗಬಹುದು.

Leave A Reply

Your email address will not be published.