ನೀಲಿ ಚಿತ್ರ ತಾರೆಯ ದಿಢೀರ್ ನಾಪತ್ತೆಯ ಹಿಂದಿದೆ ಆತನ ಕೈವಾಡ!! ದೇಹವನ್ನು ತುಂಡು ತುಂಡು ಮಾಡಿ ಸುಟ್ಟೇ ಬಿಟ್ಟ

26 ವರ್ಷದ ನೀಲಿ ಚಿತ್ರ ತಾರೆ ಚಾರ್ಲೊಟ್ ಆಂಜಿ ಎಂಬಾಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಮಾತ್ರವಲ್ಲೇ ಆಕೆಯ ಮೃತದೇಹವನ್ನು ತುಂಡರಿಸಿದ ವ್ಯಕ್ತಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಈ ಹೃದಯವಿದ್ರಾವಕ ಘಟನೆ ನಡೆದಿರೋದು ಇಟಲಿಯಲ್ಲಿ. ಈ ಪ್ರಕರಣದಲ್ಲಿ 43 ವರ್ಷದ ಬ್ಯಾಂಕರ್ ಮತ್ತು ಫುಡ್ ಬ್ಲಾಗರ್ ಡೇವಿಡ್ ಫೊಂಟಾನಾ ಎಂಬುವವರೇ ಬಂಧಿತರು.


Ad Widget

Ad Widget

Ad Widget

Ad Widget

Ad Widget

Ad Widget

ಆಂಜಿ ಮಿಲನ್ ನ ಲೊಂಬಾರ್ಡಿಯ ಮೆಟ್ರೋಪಾಲಿಟನ್ ಸಿಟಿಯ ನಿವಾಸಿ. ಈ ಮೊದಲು ಈಕೆ ಸುಗಂಧ ದ್ರವ್ಯ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಮಹಾಮಾರಿ ಕೊರೊನಾದಿಂದಾಗಿ ತನ್ನ ವೃತ್ತಿಯಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಬಂತು. ಹಾಗಾಗಿ ನೀಲಿ ಚಿತ್ರದಲ್ಲಿ ನಟಿಸಲು ಪ್ರಾರಂಭಿಸಿದ್ದಾಳೆ‌.

ಕೊಲೆಯಾದ ಆಂಜಿ ಮಾರ್ಚ್ 11 ರಿಂದ 13 ರವರೆಗೆ ಲಕ್ಸಿ ಕ್ಲಬ್ ನಲ್ಲಿ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಆಕೆ ನಾಪತ್ತೆಯಾಗಿದ್ದಳು. ಆದರೆ ಆಂಜಿಯ ಅಭಿಮಾನಿಯೊಬ್ಬ ದಿಢೀರ್ ನಾಪತ್ತೆ ಹಾಗೂ ಅನುಪಸ್ಥಿತಿಯ ಬಗ್ಗೆ ಅನುಮಾನಗೊಂಡು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾನೆ. ನಂತರ ತನಿಖೆ ಕೈಗೊಂಡ ಪೊಲೀಸರು ಆಕೆಯ ಕೊಲೆಯಾಗಿರುವುದಾಗಿ ಕಂಡು ಹಿಡಿದಿದ್ದಾರೆ.

ಆರೋಪಿಗಳು ಆಂಜಿಯನ್ನು ಕೊಂದು ಆಕೆಯ ಶವವನ್ನು ಫ್ರೀಜರ್ ನಲ್ಲಿಟ್ಟು, ಒಂದು ತಿಂಗಳ ನಂತರ ಕತ್ತರಿಸಿ ದೇಹದ ತುಂಡು ತುಂಡು ಭಾಗಗಳಿಗೆ ಬೆಂಕಿ ಹಚ್ಚಿ ತ್ಯಾಜ್ಯ ವಿಲೇವಾರಿಗೆ ನೀಡಿರೋದಾಗಿ ಒಪ್ಪಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: