ಕೆ.ಎಲ್.ರಾಹುಲ್ ಗೆ ಬೈದವರು ಇವರಿಬ್ಬರು ! ಏತಕ್ಕಾಗಿ ಗೊತ್ತೆ ?

ಭಾರತ ಕ್ರಿಕೆಟ್‌ ತಂಡದ ಉಪನಾಯಕ ಕೆ.ಎಲ್‌.ರಾಹುಲ್‌ ಸದ್ಯ ಲಕ್ನೋ ಸೂಪರ್‌ ಜೈಂಟ್ಸ್‌ ಐಪಿಎಲ್‌ ತಂಡದ ನಾಯಕರಾಗಿದ್ದಾರೆ.  ಭವಿಷ್ಯದ ನಾಯಕ ಅಂತಾನೇ ಬಿಂಬಿತವಾಗುತ್ತಿರೋ ಕನ್ನಡಿಗ  ಕೆಎಲ್ ರಾಹುಲ್ ಸದ್ಯ ಮೂರು ಮಾದರಿ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾಗೆ ಆಧಾರ ಸಂಭ್ತ. ಯಾವುದೇ ಆರ್ಡರ್ ನಲ್ಲಿಯಾದರೂ ತಂಡಕ್ಕೆ ನೆರವಾಗುವ ಕೆಎಲ್ ರಾಹುಲ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕನಾಗಿ ಮಿಂಚಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೈದಾನದಲ್ಲಿ ಸದಾ ಅಬ್ಬರಿಸುವ ಕೆ ಎಲ್ ರಾಹುಲ್ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.

ಅಭಿಮಾನಿಗಳಿಂದ ಸದಾ ಹೊಗಳಿಸಿಕೊಳ್ಳುವ ಕೆ.ಎಲ್. ರಾಹುಲ್ ಕೆಲ ಜನರ ಬಳಿ ಬೈಸಿಕೊಂಡಿದ್ದಾರೆ.‌ ಯಾರ್ಯಾರ ಬಳಿ ಮತ್ತು ಹೇಗೆ ಎಂಬುದನ್ನು ಅವರೇ ಒಂದು ಚಾಟ್ ಶೋ ಮೂಲಕ ಹಂಚಿಕೊಂಡಿದ್ದಾರೆ ಓದಿ;

ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್‌ ಕೋಚ್‌ಗಳಿಂದ ಬೈಸಿಕೊಂಡಿದ್ದ ಘಟನೆಯನ್ನು ಹೇಳಿದ್ದಾರೆ. ನನಗೆ ಈಗಲೂ ನೆನಪಿದೆ, ನಾನು ಮತ್ತು ಮಯಾಂಕ್‌ ದಿಲ್ಲಿಯಲ್ಲಿದ್ದೆವು. ಅಂಡರ್ 19 ಅಥವಾ ಅಂಡರ್ 22 ಕರ್ನಾಟಕ ತಂಡದ ಪರ ಆಡಲು ನಾವು ಅಲ್ಲಿಗೆ ಹೋಗಿದ್ದೆವು. ನಾವು ಎದುರಾಳಿಯನ್ನು ಸೋಲಿಸಿದ್ದರಿಂದ ಪಂದ್ಯ ಬಹುಬೇಗ ಮುಗಿದಿತ್ತು ಹಾಗೂ ಮರು ದಿನ ಬೆಳಗ್ಗೆ 5 ಗಂಟೆಗೆ ನಾವು ಪ್ರಯಾಣ ಬೆಳೆಸಬೇಕಾಗಿತ್ತು,” ಅಂದು ಮಧ್ಯಾಹ್ನ 3 ಅಥವಾ 3:30ಕ್ಕೆ ಪಂದ್ಯ ಮುಗಿದಿತ್ತು. ಹಾಗಾಗಿ ಇನ್ನೂ ಬಹಳಷ್ಟು ಸಮಯವಿದೆ, ಹೊರಗಡೆ ಸುತ್ತಾಡಿಕೊಂಡು ಬರೋಣ ಎಂದು ಅಂದುಕೊಂಡಿದ್ದೆವು. ಅಂದಹಾಗೆ ನಾವು ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ದೊಡ್ಡ ಗೇಟ್‌ ಇತ್ತು. ರಾತ್ರಿ 9 ಗಂಟೆಗೆ ನಾವು ಹೊರಗಡೆ ಹೊಗಿದ್ದೆವು ಹಾಗೂ ಬೆಳಗಿನ ಜಾವ 4 ಗಂಟೆಗೆ ವಾಪಸ್‌ ಆಗಿದ್ದೆವು. ಏಕೆಂದರೆ ಬೆಳಗ್ಗೆ 5 ಗಂಟೆಗೆ ನಮಗೆ ಬಸ್‌ ಇತ್ತು. ಹಾಗಾಗಿ ನಾವು ಗೇಟ್‌ ಅನ್ನು ಹತ್ತಿಕೊಂಡು ರೂಂ ಸೇರಬೇಕಾಗಿತ್ತು. ಮಯಾಂಕ್‌ ಅಗರ್ವಾಲ್‌ 15 ನಿಮಿಷ ತಡವಾಗಿ ಬಂದಿದ್ದರು. ಇದರಿಂದಾಗಿ ನಮ್ಮನ್ನು ಕೋಚ್‌ಗಳು ಬೈದಿದ್ದರು. ಈ ವೇಳೆ ನಾವೆಲ್ಲರೂ ಸನ್‌ ಗ್ಲಾಸ್‌ಗಳನ್ನು ಧರಿಸಿದ್ದೆವು. ನಿಮಗೆ ಗಂಭೀರತೆ ಇಲ್ಲ ಎಂದು ನಮ್ಮ ವಿರುದ್ಧ ಕೋಚ್‌ಗಳು ಕಿಡಿಕಾರಿದ್ದರು.

ಅಷ್ಟೇ ಅಲ್ಲದೆ ಕೆ.ಎಲ್ . ರಾಹುಲ್ ಪ್ರತಿದಿನ ಅಮ್ಮನ ಹತ್ತಿರ ಬೈಸಿಕೊಳ್ಳುತ್ತಾರೆ . ಯಾವ ವಿಷಯಕ್ಕೆ ಗೊತ್ತೆ ಇಲ್ಲಿದೆ ನೋಡಿ ನನ್ನ ತಾಯಿ ಈಗಲೂ ನೀನು ಪದವಿ ಪೂರೈಸಿಲ್ಲ ಎಂದು ಬೈಯ್ಯುತ್ತಾರೆ. ಕೊರೊನಾ ಕಾರಣಕ್ಕೆ ಲಾಕ್‌ಡೌನ್‌ ಆಗಿದ್ದಾಗ, ನೀನ್ಯಾಕೆ ಪಟ್ಟುಹಿಡಿದು ಕೂತು ಓದಬಾರದು? ಇನ್ನೂ ಬಾಕಿಯಿರುವ 30 ವಿಷಯಗಳನ್ನು ಓದಿ ಮುಗಿಸಲು ಏನು ಕಷ್ಟ? ಅನುತ್ತೀರ್ಣಗೊಂಡಿರುವ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಪದವಿ ಮುಗಿಸಬಹುದಲ್ಲ? ಎಂದು ಕೇಳಿದ್ದರು. ಆಗದಕ್ಕೆ ನಾನು, ಅಮ್ಮಾ ನಾನೇನು ಮಾಡಬೇಕು ಹೇಳು? ನಾನು ಕ್ರಿಕೆಟ್‌ ಆಡುತ್ತಿದ್ದೇನೆ, ಪ್ರದರ್ಶನ ಚೆನ್ನಾಗಿಯೇ ಇದೆ. ಈಗ ನಾನು 30 ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೀಬೇಕಾ? ಎಂದು ಪ್ರಶ್ನಿಸಿದ್ದೆ. ಅಮ್ಮಾ ಅಷ್ಟೇ ಸಹಜವಾಗಿ, ಹೌದು ಏನು ತಪ್ಪು ಎಂದರು! ಎನ್ನುತ್ತಾರೆ.

ನಾನು ಭಾರತ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ನಮ್ಮಪ್ಪ ಅಮ್ಮ ಬಹಳ ಖುಷಿ ಪಟ್ಟಿರಲಿಲ್ಲ. ಅದಾಗಿ ನಾಲ್ಕು ವರ್ಷ ನಾನು ಕ್ರಿಕೆಟ್‌ ಆಡಿ ಹೆಸರು ಮಾಡಿದ್ದೆ. ಆಮೇಲೆ ನನಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಕೆಲಸ ಸಿಕ್ಕಿತು. ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿದ್ದಾಗ ಅವರು ಬಹಳ, ಬಹಳ ಖುಷಿಪಟ್ಟಿದ್ದರು!  ಎಂದಿದ್ದಾರೆ ಕೆ.ಎಲ್. ರಾಹುಲ್

Leave A Reply

Your email address will not be published.