ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!

ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.‌ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಗ್ರಾಹಕರು ಸಂಖ್ಯೆ ಕಡಿಮೆಯಾಗುವ ಆತಂಕದಿಂದ ತಿಂಡಿ-ತಿನಿಸು ದರ ಏರಿಕೆ ಮಾಡಿರಲಿಲ್ಲ. ಸದ್ಯ ಅಡುಗೆ ಎಣ್ಣೆ (ಲೀಟರ್‌ಗೆ .200), ಅಡುಗೆ ಅನಿಲ (.50 ಹೆಚ್ಚಳ) ಬೆಲೆ ಹೆಚ್ಚಾಗಿದೆ. ಹಾಗಾಗಿ ದರ ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಹೋಟೇಲ್ ಮಾಲಿಕರು ಹೇಳಿದ್ದಾರೆ.

ಏಪ್ರಿಲ್ 1 ರಿಂದ ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಶೇಕಡ ಹತ್ತರಷ್ಟು ಹೆಚ್ಚಳವಾಗಲಿದೆ. ವಡೆ 25 ರೂಪಾಯಿ, ಪೂರಿ 50 ರೂಪಾಯಿಗೆ ಏರಿಕೆಯಾಗಲಿದೆ. ಕರಿದ ಪದಾರ್ಥ ದ ಬೆಲೆ ಏರಿಕೆಯಾಗಿದೆ. ಉಳಿದಂತೆ ತಿಂಡಿ, ಊಟದ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ. ದರ ಏರಿಕೆ ಬಳಿಕ ನಾಲ್ಕು ದಿನದ ವ್ಯಾಪಾರ, ವಹಿವಾಟು ನೋಡಿಕೊಂಡು ಪುನಃ ಏ.4ರಂದು ಸಂಘದ ಸದಸ್ಯರ ಜತೆಗೆ ಸಭೆ ನಡೆಸಿ ಚರ್ಚಿಸಲಿದ್ದೇವೆ‌ ಎಂದು ಹೋಟೆಲ್ ಮಾಲಿಕರು ತಿಳಿಸಿದ್ದಾರೆ.

Leave A Reply

Your email address will not be published.