ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ|ನಿಜವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು -ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು: ಬ್ರಿಟಿಷರ ಕಾಲದಿಂದಲ್ಲೂ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದ್ದು,ಗೋಮಾಳ ಭೂಮಿಯನ್ನು ಉಳಿಸಿಕೊಳ್ಳುವ ಮನಸ್ಥಿತಿ ನಮ್ಮದು ,ನಿಜವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಭಾಗದಲ್ಲಿ ಕುಮ್ಕಿ ಭಾಣಿ ಭೂಮಿಗಳಿವೆ, ಉತ್ತರ ಕನ್ನಡ ಜಿಲ್ಲಾಯಲ್ಲಿ ಬೆಟ್ಟ, ಹಾಡಿಗಳಿವೆ, ಮೈಸೂರು ಭಾಗದಲ್ಲಿ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನಲ್ಲಿ ಜಮ್ಮಾ ಮತ್ತು ಬಾಣಿ, ಹೈದರಾಬಾದ್ ಪ್ರದೇಶದಲ್ಲಿ ತರಿಗ ಭೂಮಿಗಳ ಬಗೆಗಿನ ವಿಶೇಷಾಕಾರಿಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯಾದ್ಯಂತ ಈ ರೀತಿ ಲಕ್ಷಾಂತರ ಎಕರೆ ಭೂಮಿ ಇದ್ದು,ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 35 ಎಕರೆ ಇದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ರೈತರಿಗೂ ಇಲ್ಲ ಎಂಬಂತಾಗಿದೆ. ಅದಕ್ಕಾಗಿ ಈ ಭೂಮಿಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಸರ್ಕಾರ ಇದೆ ಎಂದರು.ಕಾನೂನು ಪ್ರಕಾರ ರೈತರಿಗೆ ಭೂಮಿಯನ್ನು ನೀಡಲು ಪರಿಶೀಲನೆ ನಡೆಸಲಿದ್ದು,ಮಲೆನಾಡು ಭಾಗದ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಪರಿಶೀಲಿಸಲಾಗುತ್ತಿದೆ.ಅದಕ್ಕೆ ರೈತರಿಂದ ಎಷ್ಟು ಹಣ ಸಂಗ್ರಹಿಸಬೇಕು ಎಂಬ ಬಗ್ಗೆ ನಾನೇ ಖುದ್ದಾಗಿ ಮಲೆನಾಡು, ಚಿಕ್ಕಮಗಳೂರು ಹಾಗೂ ಇತರ ಪ್ರದೇಶಗಳಿಗೆ ಹೋಗಿ ರೈತರ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದರು.

Leave A Reply

Your email address will not be published.