ನಾಳೆಯಿಂದ ಬದಲಾಗಲಿವೆ ಹಲವು ನಿಯಮ | ಹೊಸ ಹಣಕಾಸು ವರ್ಷದಲ್ಲಿ ಆಗುವ ಬದಲಾವಣೆಗಳ ಪಟ್ಟಿ ಇಲ್ಲಿದೆ

0 10

ಹಣಕಾಸು ವರ್ಷ ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹೊಸ ಹಣಕಾಸು ವರ್ಷ ಏಪ್ರಿಲ್ 1 ಪ್ರಾರಂಭಗೊಳ್ಳಲಿದೆ. ಹಾಗಾಗಿ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ.

ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗಲಿವೆ.

ಹಾಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಮುಖ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ ಸಮಸ್ಯೆಗಳಿಗೆ ಇಂದಿನಿಂದಲೇ ಪರಿಹಾರವನ್ನು ಕಂಡುಕೊಳ್ಳಬಹುದು.

ನೀವು ಮಾರ್ಚ್ 31, 2022 ರೊಳಗೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಪಾನ್ ಕಾರ್ಡನ್ನು ಲಿಂಕ್ ಮಾಡಿ. ಇಲ್ಲದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು ಹಾಗೂ ನೀವು ದಂಡ ಕೂಡಾ ತೆರಬೇಕಾಗುತ್ತದೆ. ಆದರೆ, ದಂಡದ ಮೊತ್ತವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಇದನ್ನು ತಪ್ಪಿಸಲು ನಿಮ್ಮ ಪಾನ್ ಕಾರ್ಡನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಒಳ್ಳೆಯದು.

ಕೇಂದ್ರ ಸರ್ಕಾರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾನೂನುಗಳನ್ನು ಜಾರಿಗೆ ತರಲಿದೆ. ವಾಸ್ತವವಾಗಿ, ಏಪ್ರಿಲ್ 1 ರಿಂದ, ಅಸ್ತಿತ್ವದಲ್ಲಿರುವ ಪಿಎಫ್ ಖಾತೆಯನ್ನು ಎರಡು ಭಾಗಗಳಾಗಿ ವಿಂಗಡಿಸುವ ಸಾಧ್ಯತೆ ಇದೆ. ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ನಿಯಮಗಳ ಪ್ರಕಾರ, ಇಪಿಎಫ್ ಖಾತೆಯಲ್ಲಿ 2.5 ಲಕ್ಷ ರೂಪಾಯಿವರೆಗಿನ ತೆರಿಗೆ ಮುಕ್ತ ಕೊಡುಗೆಯ ಮಿತಿಯನ್ನು ವಿಧಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದರೆ, ಬಡ್ಡಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ.

ಏಪ್ರಿಲ್ 1, 2022 ರಿಂದ ಆಕ್ಸಿಸ್ ಬ್ಯಾಂಕ್‌ನ ಸಂಬಳ ಅಥವಾ ಉಳಿತಾಯ ಖಾತೆಯಲ್ಲಿ ನಿಯಮಗಳು ಬದಲಾಗಲಿವೆ. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು 10 ಸಾವಿರದಿಂದ 12 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಏಪ್ರಿಲ್‌ನಲ್ಲಿ PPS ಅನ್ನು ಜಾರಿಗೊಳಿಸುತ್ತಿದೆ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಏಪ್ರಿಲ್ 4 ರಿಂದ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ.

ಏಪ್ರಿಲ್ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 1 ರಿಂದ ಹೊಸ ಬೆಲೆ ಬಂದರೆ, ಜ್ವರ, ಸೋಂಕು, ಹೃದ್ರೋಗ, ಅಧಿಕ ರಕ್ತದೊತ್ತಡ, ಚರ್ಮ ರೋಗಗಳು ಮತ್ತು ರಕ್ತಹೀನತೆಯ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ದುಬಾರಿಯಾಗಬಹುದು ಎನ್ನಲಾಗಿದೆ.

ಏಪ್ರಿಲ್ 1, 2022ರಿಂದ ಪೋಸ್ಟ್ ಆಫೀಸ್ MIS, SCSC ಅಥವಾ ಟರ್ಮ್ ಠೇವಣಿ ಮೇಲಿನ ಬಡ್ಡಿಯನ್ನು ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುವುದು. ಹಾಗಾಗಿ ಅಂತಹ ಖಾತೆದಾರರು ತಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಯನ್ನು ಈ ಖಾತೆಗಳೊಂದಿಗೆ ಜೋಡಿಸಲು ಸೂಚಿಸಲಾಗಿದೆ.

Leave A Reply