AICTE ಯಿಂದ ಮಹತ್ವದ ಮಾಹಿತಿ : ಆರ್ಕಿಟೆಕ್ಚರ್, ಫ್ಯಾಷನ್ ಟೆಕ್ನಾಲಜಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇನ್ನು ಪಿಸಿಎಂ ಕಡ್ಡಾಯವಲ್ಲ !

ಭೌತಶಾಸ್ತ್ರ ರಸಾಯನಶಾಸ್ತ್ರ ಅಥವಾ ಗಣಿತವನ್ನು 12ನೇ ತರಗತಿಯಲ್ಲಿ ಅಭ್ಯಾಸ ಮಾಡದೆ ಇರುವವರೂ ಕೂಡ ಪದವಿಯಲ್ಲಿ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪ್ರೋಗ್ರಾಂ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು ಎಂದು ಕಳೆದವರ್ಷ ಎಐಸಿಟಿಇ ಹೇಳಿತ್ತು.

ಈ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅನೇಕ ಮಂದಿ ವಿರೋಧ ಕೂಡಾ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪ್ರಸಕ್ತ ಸಾಲಿನಲ್ಲೂ ಕೆಲವು ಕೋರ್ಸ್‌ಗಳಿಗೆ ಪಿಸಿಎಂನಿಂದ ವಿನಾಯಿತಿ ನೀಡಲಾಗಿದೆ. ಆರ್ಕಿಟೆಕ್ಚರ್ ಕೋರ್ಸ್ ಮಾತ್ರವಲ್ಲ ಜತೆಗೆ ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ಕೋರ್ಸ್‌ಗಳ ಪ್ರವೇಶಕ್ಕೂ ಭೌತಶಾಸ್ತ್ರ ರಸಾಯನಶಾಸ್ತ್ರ ಮತ್ತು ಗಣಿತ ಅಭ್ಯಾಸ ಮಾಡಿರುವುದು ಕಡ್ಡಾಯವಲ್ಲ ಎಂದು ಹೇಳಿದೆ.

ಆರ್ಕಿಟೆಕ್ಚರ್, ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ಕೋರ್ಸ್‌ಗಳಿಗೆ ಪಿಸಿಎಂ ಕಡ್ಡಾಯವಲ್ಲ. ಹಾಗಂತ ಅದನ್ನು ಮಾಡಿದವರಿಗೂ ಅವಕಾಶ ಇದೆ. ಇವುಗಳನ್ನು ಹೊರತು ಪಡಿಸಿ ಯಾವೆಲ್ಲ ವಿಷಯ ಅಧ್ಯಯನ ಮಾಡಿದವರಿಗೆ ಈ ಮೂರು ಕೋರ್ಸ್‌ಗಳಿಗೆ ಪ್ರವೇಶ ಸಿಗಲಿದೆ ಎಂಬುದನ್ನು ಎಐಸಿಟಿಇ ತಿಳಿಸಿದೆ. ಅವುಗಳು ಯಾವುದೆಂದರೆ, ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಇನ್‌ಫಾರ್ಮೇಶನ್ ಟೆಕ್ನಾಲಜಿ, ಬಯಾಲಜಿ, ಇನ್ ಫಾರ್ಮೇಟಿಕ್ ಪ್ರಾಕ್ಟಿಸ್, ಬಯೋಟೆಕ್ನಾಲಜಿ, ತಾಂತ್ರಿಕ ವೃತ್ತಿಪರ ವಿಷಯ, ಎಂಜಿನಿಯರಿಂಗ್ ಗ್ರಾಫಿಕ್ಸ್, ವ್ಯಾಪಾರ ಅಧ್ಯಯನಗಳು ಮತ್ತು ಉದ್ಯಮಶೀಲತೆ. ಈ ವಿಷಯಗಳಲ್ಲಿ ಯಾವುದೇ ಮೂರು ವಿಷಯಗಳ ಅಧ್ಯಯನ ಮಾಡಿದವರು ಆರ್ಕಿಟೆಕ್ಚರ್, ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿಗೆ ಪ್ರವೇಶ ಪಡೆಯಬಹುದು.

Leave A Reply

Your email address will not be published.