ಮಂಗಳೂರು : ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಆಯತಪ್ಪಿ ಬಿದ್ದು ಕಾರ್ಮಿಕನೋರ್ವನ ಸಾವು !

ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದಿಂದ ಕಾರ್ಮಿಕನೋರ್ವ ಆಯ ತಪ್ಪಿ ಕೆಳಗೆ ಬಿದ್ದ ಘಟನೆಯೊಂದು ಪಡೀಲ್ ಬಳಿ ಸೋಮವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಯದಡಿ ನಿವಾಸಿ ವಿಜಯ್ ( 22) ಮೃತಪಟ್ಟ ಯುವಕ.


Ad Widget

Ad Widget

Ad Widget

ನಿನ್ನೆ ಮಧ್ಯಾಹ್ನ ಸುಮಾರು 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ವಿಜಯ್ ಮತ್ತಿಬ್ಬರು ಕಟ್ಟಡದ 4 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯ್ ಕೊನೆ ಮಗನಾಗಿದ್ದು, ಈತನ ದುಡಿಮೆಯೇ ಕುಟುಂಬಕ್ಕೆ ಆಧಾರ ಸ್ತಂಭವಾಗಿತ್ತು. ಕಳೆದ ಬಾರಿಯಷ್ಟೇ ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ವಿಜಯ್ ಕಟ್ಟಡಗಳಲ್ಲಿ ಪೈಂಟಿಂಗ್ ಕೆಲಸಕ್ಕೆ ಸೇರಿದ್ದ. ಈತ ವಿಹಿಂಪ, ಬಜರಂಗದಳದ ಸಕ್ರಿಯ ಸದಸ್ಯ ಕೂಡಾ ಆಗಿದ್ದಾನೆ.

Leave a Reply

error: Content is protected !!
Scroll to Top
%d bloggers like this: