86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿ; ಹೆಚ್ಚಿನ ವಿವರ ಇಲ್ಲಿದೆ ನೋಡಿ

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಮೇ 20,21,22 ರಂದು ಹಾವೇರಿಯಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ ಅವರು ಆಯ್ಕೆಗೊಂಡಿದ್ದಾರೆ.

ಕೋವಿಡ್ ನಿಂದ 2 ವರ್ಷ ಸಮ್ಮೇಳನ ನಡೆಸಲು ಸಾಧ್ಯವಾಗದಿದ್ದರಿಂದ ಈ ಸಲ ಅದ್ಧೂರಿಯಾಗಿ ಮತ್ತು ವೈಶಿಷ್ಟ ಪೂರ್ಣವಾಗಿ ಸಮ್ಮೇಳನ ನಡೆಸಬೇಕು. ಹಾವೇರಿಯಲ್ಲಿ ಅದ್ಧೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ 20 ಕೋಟಿ ರೂ.ಗಳನ್ನು ಮೀಸಲು ಇಟ್ಟಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚೆ ನಡೆಸಿ ಅಧಿಕೃತ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.

ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ, ಸಾರಿಗೆ ಮತ್ತು ಭೋಜನ ಒದಗಿಸುವ ಕುರಿತಂತೆ ಚರ್ಚಿಸಲಾಗಿದೆ. ಸಮ್ಮೇಳನ ಜನ ಜಾತ್ರೆಯಾಗಬಾರದು, ಅರ್ಥಪೂರ್ಣ ಮತ್ತು ಬಹಳ ಕಾಲ ನೆನಪಿನಲ್ಲಿ ಉಳಿಯುವಂತಹ ಸಮ್ಮೇಳನ ಆಗಬೇಕು ಎಂದು ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.

Leave A Reply

Your email address will not be published.