ಮುಂದಿನ ಐದು ದಿನ ದೇಶದ ಹಲವು ರಾಜ್ಯದಲ್ಲಿ ಉಷ್ಣ ಅಲೆ; ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

ಈಗಾಗಲೇ ಬೇಸಿಗೆ ಶುರುವಾಗಿದ್ದು, ಹಲವು ರಾಜ್ಯಗಳು ಪ್ರದೇಶಗಳಲ್ಲಿ ಬಿರುಬಿಸಿಲು ಶುರುವಾಗಿದೆ. ಇದರ ಜೊತೆ
ಮುಂದಿನ ಐದು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಉಷ್ಣಅಲೆ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಾರಿ ಸರಾಸರಿ ತಾಪಮಾನಕ್ಕಿಂತ ಮೂರು ಪಟ್ಟು ಜಾಸ್ತಿ. 
ದೆಹಲಿಯಲ್ಲಿ ಮಾರ್ಚ್​ 28ರಂದು ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್​ಗೆ ತಲುಪಬಹುದು. ಶುಷ್ಕ ವಾತಾವರಣದ ನಡುವೆ, ಹಗಲಿನಲ್ಲಿ ಬಿಸಿಲಿನ ತಾಪದಿಂದ ಉಷ್ಣತೆಯು ಹೆಚ್ಚಾಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ಎಚ್ಚರಿಕೆ ನೀಡಿದೆ.


Ad Widget

Ad Widget

Ad Widget

ಮಾರ್ಚ್​ 31ರವರೆಗೆ ಜಮ್ಮು-ಕಾಶ್ಮೀರ, ಉತ್ತರಾಖಂಡ್​, ರಾಜಸ್ಥಾನ, ಗುಜರಾತ್​, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್​ ಮತ್ತು ಹರ್ಯಾಣದ ದಕ್ಷಿಣ ಭಾಗಗಳು ಸೇರಿ ಹಲವೆಡೆ ಉಷ್ಣ ಅಲೆ ಇರಲಿದ್ದು,ಸೌರಾಷ್ಟ್ರ-ಕಚ್​ ಸೇರಿ ಇನ್ನೂ ಅನೇಕ ಪ್ರದೇಶಗಳಲ್ಲಿ ಮಾರ್ಚ್​ 31ರವರೆಗೂ ಉಷ್ಣ ಗಾಳಿ ಇರಲಿದೆ ಎಂದು ಐಎಂಡಿ (IMD) ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: