SSLC ಪರೀಕ್ಷಾ ಕೇಂದ್ರಕ್ಕೆ ಹೆಜ್ಜೇನು ದಾಳಿ : ದಿಕ್ಕುಪಾಲಾಗಿ ಓಡಿ ಹೋದ ವಿದ್ಯಾರ್ಥಿಗಳು

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ. ಎಲ್ಲಾ ಕಡೆ ಪರೀಕ್ಷೆ ನಿರ್ವಿಘ್ನವಾಗಿ ನಡೆದರೆ ಇಲ್ಲೊಂದು ಕಡೆ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ ಮಾಡಿದರ ಪರಿಣಾಮ ವಿದ್ಯಾರ್ಥಿಗಳು, ಪಾಲಕರು, ಪರೀಕ್ಷಾ ಮೇಲ್ವಿಚಾರಕರು ದಿಕ್ಕುಪಾಲಾಗಿ ಓಡಿ ಹೋದ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿರೋದು ಶಿವಮೊಗ್ಗ ನಗರದ ಬಿ ಎಚ್ ರಸ್ತೆಯ ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ಸಂಭವಿಸಿದೆ.

ಇಂದು ( ಸೋಮವಾರ ) ಬೆಳಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಕ್ಕೂ ಮೊದಲು ಈ ಘಟನೆ ಸಂಭವಿಸಿದೆ. ಒಂದು ಕಡೆ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರುತ್ತಿದ್ದ ಪೋಷಕರು, ಅತ್ತ ಕಡೆ ಇನ್ನೇನು ಕೆಲವೇ ಕ್ಷಣದಲ್ಲಿ ಎಕ್ಸಾಂ ಆರಂಭಿಸುವ ಸಿದ್ಧತೆಯಲ್ಲಿ ಮೇಲ್ವಿಚಾರಕರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಹೆಜ್ಜೆನ ದಾಳಿ ಮಾಡಿವೆ. ಈ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದವರು ದಿಕ್ಕಪಾಲಾಗಿ ಓಡಿದ್ದಾರೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ವೈದ್ಯರ ತಂಡ, ಹೆಜ್ಜೇನಿನಿಂದ ಕಡಿತಕ್ಕೊಳಗಾದ ಮಕ್ಕಳು ಮತ್ತು ಪರೀಕ್ಷಾ ಮೇಲ್ವಿಚಾರಕರಿಗೆ ಚಿಕಿತ್ಸೆ ನೀಡಿದರು. 6 ವಿದ್ಯಾರ್ಥಿಗಳು, 10ಕ್ಕೂ ಹೆಚ್ಚು ಪಾಲಕರಿಗೆ ಗಾಯವಾಗಿದೆ.

Leave A Reply

Your email address will not be published.