ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡುವಾಗ ಮೊಬೈಲ್ ಸ್ವಿಚ್ ಆಫ್ | ನಂತರ ಯುವಕನ ವರ್ತನೆಯಲ್ಲಿ ವಿಚಿತ್ರ ಬದಲಾವಣೆ |

ಮಕ್ಕಳು ಮೊಬೈಲ್ ಫೋನ್ ಅಡಿಕ್ಟ್ ಆದರೆ ಯಾವೆಲ್ಲ ತೊಂದರೆಗಳು ಪೋಷಕರು ಅನುಭವಿಸಬಹುದು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಯೋಚನೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಈಗ ನಾವು ಹೇಳುವ ಹುಡುಗನಿಗೆ ಆದ ಪರಿಸ್ಥಿತಿ ಆಗಬಹುದು. ಇದರ ಪರಿಣಾಮ ಏನು ಎಂಬುದನ್ನು ಇಲ್ಲಿ ತಿಳಿಸ್ತೀವಿ.

22 ವರ್ಷದ ಯುವಕ ಈ ಆನ್ಲೈನ್ ಗೇಮ್ ಗಳ ವ್ಯಸನಿಯಾಗಿ ಈಗ ಅದರಿಂದ ಹೊರಬರಲಾರದೇ ಕಷ್ಟಪಡುತ್ತಿದ್ದಾನೆ.

ರಾಜಸ್ಥಾನದ ಚಿತ್ತೋರ್‌ಗಢದ 22 ವರ್ಷದ ಇರ್ಫಾನ್ ಅನ್ಸಾರಿ ಆನ್‌ಲೈನ್ ಗೇಮ್‌ಗಳಿಗೆ ವ್ಯಸನಿಯಾಗಿದ್ದಾನೆ. ಹೀಗೆ ಒಮ್ಮೆ ಗೇಮ್ ಆಡುವಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಮಾನಸಿಕ ಸಮತೋಲನವನ್ನು ಕಳೆದುಕೊಂಡ ಹಾಗೇ ವರ್ತಿಸಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ‘ಹ್ಯಾಕರ್ ಪಾಸ್ ವರ್ಡ್ ಚೇಂಜ್, ಐಡಿ ಲಾಕ್’ ಎಂಬ ವಿಚಿತ್ರವಾದ ಮಾತುಗಳನ್ನಾಡತೊಡಗಿದ್ದಾನೆ. ಈತನ ವರ್ತನೆಯಿಂದ ವಾಹನ ಸವಾರರು ತಲೆಕೆಡಿಸಿಕೊಳ್ಳದೇ
ಮುಂದೆ ಸಾಗಿದ್ದಾರೆ. ಇದನ್ನರಿತ ಇರ್ಫಾನ್ ಸ್ನೇಹಿತರು ಅವನನ್ನು ಹಿಡಿದು ಮನೆಗೆ ಕರೆದೊಯ್ದರು. ಅಲ್ಲಿ ಅವನನ್ನು ಮಂಚದ ಮೇಲೆ ಮಲಗಿಸಿ ಹಗ್ಗದಿಂದ ಕಟ್ಟಿಹಾಕಲಾಯಿತು. ಆದರೂ ಅವನು ಆಟದ ಹುಚ್ಚಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಆಟದ ಗುಂಗಲ್ಲೇ ಅವನು ವಿಚಿತ್ರ ಮಾತುಗಳನ್ನಾಡುತ್ತಿದ್ದನು.

ಆನ್‌ಲೈನ್ ಆಟಗಳಿಂದಾಗಿ ಇಂತಹ ಘಟನೆಗಳು ಮುಂಚೂಣಿಗೆ ಬಂದ ನಂತರ, ಆನ್‌ಲೈನ್ ಆಟಗಳು ಚಿಕ್ಕ ಮಕ್ಕಳ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ ಎಂದು ಮನೋವೈದ್ಯರು ಹೇಳುತ್ತಾರೆ.

ಭವಿಷ್ಯದಲ್ಲಿ ಮಕ್ಕಳಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮಗು ಆನ್‌ಲೈನ್ ಗೇಮ್ ಆಡುತ್ತಿದ್ದರೆ, ನೀವು ಅವನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

Leave A Reply

Your email address will not be published.