ಜಿಂಕೆಯನ್ನು ಸಂಪೂರ್ಣ ಸುತ್ತಿಕೊಂಡು ನುಂಗಲು ಮುಂದಾದ ದೈತ್ಯ ಹೆಬ್ಬಾವು !! | ಹಾವಿನ ಬಿಗಿತದಿಂದ ಜಿಂಕೆಯನ್ನು ಬಿಡಿಸಲು ಯುವಕನೊಬ್ಬನ ಅವಿರತ ಪ್ರಯತ್ನ- ವೀಡಿಯೋ ವೈರಲ್

0 8

ಭಯಾನಕ ಜೀವಿಗಳಲ್ಲಿ ಹೆಬ್ಬಾವು ಕೂಡ ಒಂದು. ಅದು ತನಗಿಂತ ದೊಡ್ಡ ಪ್ರಾಣಿಗಳನ್ನೂ ಸಹ ಜೀವಂತವಾಗಿ ನುಂಗಿ ಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಜಿಂಕೆಯನ್ನು ಸಂಪೂರ್ಣವಾಗಿ ಸುತ್ತಿಕೊಂಡಿದೆ. ಇದರ ನಡುವೆ ನಡೆಯುವ ಸಂಗತಿಯೊಂದು ನಿಮ್ಮ ಎದೆಯನ್ನು ಕೂಡ ಒಂದು ಕ್ಷಣ ಝಲ್ ಎನ್ನಿಸಲಿದೆ.

ಜಿಂಕೆಯ ಮೈಮೇಲೆ ಭಾರೀ ಗಾತ್ರದ ಹೆಬ್ಬಾವು ಸುತ್ತಿಕೊಂಡಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಅದು ಜಿಂಕೆಯನ್ನು ಜೀವಂತವಾಗಿ ನುಂಗಿ ಹಾಕಲು ಯತ್ನಿಸುತ್ತಿದೆ. ಈ ವೇಳೆ ಯುವಕನೊಬ್ಬ ಇದನ್ನು ನೋಡಿದ್ದಾನೆ. ಯುವಕ ಜಿಂಕೆಯ ಜೀವ ಉಳಿಸಲು ಮರದ ಕೊಂಬೆಯನ್ನು ತರುತ್ತಾನೆ. ಯುವಕ  ಮರದ ಕೊಂಬೆಯಿಂದ ಹೆಬ್ಬಾವನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ಆಗ ಹೆಬ್ಬಾವು ಕೋಪಗೊಂಡು ಯುವಕನತ್ತ ಒಮ್ಮೆಲೆ ಹಾರುತ್ತದೆ.

ಮೊದಲೇ ಸಾಕಷ್ಟು ಎಚ್ಚರಿಕೆವಹಿಸಿದ್ದ ಯುವಕ, ತುಂಬಾ ದೂರದಲ್ಲಿ ನಿಂತಿರುತ್ತಾನೆ. ಅದಲ್ಲದೆ ಆತ ನಿರಂತರವಾಗಿ ಹೆಬ್ಬಾವನ್ನು ಹೊಡೆಯುತ್ತಿರುತ್ತಾನೆ. ಒದೆ ತಿಂದ ಹೆಬ್ಬಾವು ಕೊನೆಯಲ್ಲಿ ಜಿಂಕೆಯನ್ನು ಬಿಟ್ಟು ಓಡಿ ಹೋಗುತ್ತದೆ. ಜಿಂಕೆ ಕೂಡ ಹೆಬ್ಬಾವಿನ ಬಿಗಿಮುಷ್ಠಿಯಿಂದ ಬಿಡುಗಡೆ ಹೊಂದಿ ಓಡಿ ಹೋಗಿ ತನ್ನ ಪ್ರಾಣ ಉಳಿಸಿಕೊಳ್ಳುತ್ತದೆ. @papakrab ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

Leave A Reply