ತಾಯಿ ಎದೆಹಾಲಿನ ಆಭರಣ : ತಾಯಿ ಮತ್ತು ಮಗುವಿನ ಬಾಂಧವ್ಯದ ಸ್ಮರಣಿಕೆ!

ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವುದು ಎಂದರೆ ಜನ್ಮವೇ ಸಾರ್ಥಕ್ಯವೆನಿಸುವ ಧನ್ಯತಾ ಭಾವ‌. ಪುಟ್ಟ ಕಂದಮ್ಮ ನ ಎಲ್ಲಾ ನೆನಪುಗಳನ್ನು ತಾಯಿಯಾದವಳು ಜೋಪಾನವಾಗಿ ಇರಿಸಿಕೊಳ್ಳಬೇಕೆಂದು ಬಯಸುತ್ತಾಳೆ.

ಸ್ತನ್ಯಪಾನವು ಪ್ರತಿಯೊಬ್ಬ ತಾಯಿಗೆ ಅದ್ಭುತ ಅನುಭವ. ಪುಟ್ಟ ಮಗುವಿನ ಪಾಲಿಗೆ ಹೇಗೆ ಎದೆಹಾಲು ಅಮೃತವೋ ಹಾಗೆಯೇ ತಾಯಿಯ ಪಾಲಿಗೆ ಕೂಡಾ ಹಾಲುಣಿಸುವುದು ಒಂದು ಅದ್ಭುತ ಅನುಭವವನೇ ಸರಿ. ಹೀಗಾಗಿ, ಇತ್ತೀಚಿಗೆ ಬ್ರೆಸ್ಟ್ ಮಿಲ್ಕ್ ಜ್ಯುವೆಲ್ಲರಿ ಅಥವಾ ಎದೆಹಾಲಿನ ಆಭರಣ ಟ್ರೆಂಡ್ ಆಗಿದೆ. ತಾಯಿ ಮತ್ತು ಮಗುವಿನ ನಡುವಿನ ವಿಶೇಷ ಬಾಂಧವ್ಯದ ಸ್ಮರಣಿಕೆಯನ್ನಾಗಿ ಮಾಡಿ, ಎದೆ ಹಾಲಿನ ಆಭರಣ ತಯಾರಿಸುತ್ತಾರೆ.

ಆದರೆ ಇದನ್ನೇ ಒಂದು ಕಸುಬನ್ನಾಗಿ ಮಾಡಿದ ಮಹಿಳೆ ಇದರಲ್ಲಿ ಯಶಸ್ವಿಯಾಗಿದ್ದಾಳೆ ಕೂಡಾ. ಎದೆಹಾಲನ್ನು ಮಾರಿ ವಾರ್ಷಿಕ 15 ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಈ ಎದೆಹಾಲಿನ ಆಭರಣಗಳನ್ನು ತಯಾರಿಸಿ ಈ ಮಹಿಳೆ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.

ಲಂಡನ್‌ನ ಮೂರು ಮಕ್ಕಳ ತಾಯಿ ಎದೆಹಾಲನ್ನು ಬಳಸಿ ಆಭರಣ ತಯಾರಿಸುತ್ತಿದ್ದಾರೆ. ಸಫಿಯಾ ರಿಯಾದ್ ಮತ್ತು ಅವರ ಪತಿ ಆಡಮ್ ರಿಯಾದ್ ಅವರು ಮೆಜೆಂಟಾ ಫ್ಲವರ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಇವರು ತಾಯಿ ಮತ್ತು ಬಾಂಧವ್ಯವನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಲು ಎದೆಹಾಲು ಸೇರಿಸಿದ ರಿಂಗ್, ಪೆಂಡೆಂಟ್, ಕಿವಿಯೋಲೆ, ಕಲ್ಲುಗಳನ್ನು ತಯಾರಿಸುತ್ತಿದ್ದಾರೆ. 2023ರ ವೇಳೆಗೆ ಕಂಪನಿಯ ವಹಿವಾಟು 15 ಕೋಟಿ ರೂ. ಎಂದು ವರದಿಯಾಗಿದೆ.

2019ರಲ್ಲಿ ಈ ಕಂಪನಿಯು ಆರಂಭಗೊಂಡಿತು. ಇಲ್ಲಿಯವರೆಗೆ ಸುಮಾರು 4,000 ಆರ್ಡರ್ ಪಡೆದುಕೊಂಡಿದೆ. ಸಫಿಯಾ ಮತ್ತು ಅವರ ಪತಿ ಕೋವಿಡ್ ಅವರಿಗೆ ಲಾಕ್‌ಡೌನ್ ಸಮಯದಲ್ಲಿ ಆಭರಣಗಳನ್ನು ತಯಾರಿಸಲು ತಾಯಿಯ ಹಾಲನ್ನು ಬಳಸುತ್ತಾರೆ ಎಂಬುದನ್ನು ತಿಳಿದುಕೊಂಡು ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲು ನಿರ್ಧಾರ ಮಾಡಿ ನಂತರ ಕಾರ್ಯರೂಪಕ್ಕೆ ತಂದು, ಇಂದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವಲ್ಲಿಗೆ ಬಂದು ನಿಂತಿದೆ.

ಸ್ತನ ಹಾಲಿನ ಆಭರಣವೆಂದರೆ ಎದೆ ಹಾಲಿನಿಂದ ತುಂಬಿದ ಕಲ್ಲು ಹೊಂದಿರುವ ಆಭರಣವಾಗಿದೆ.

ಎದೆ ಹಾಲನ್ನು ರಾಸಾಯನಿಕಗಳಿಂದ ಸಂರಕ್ಷಿಸಿ ನಂತರ ಬಿಸಿ ಮತ್ತು ತಂಪಾಗಿಸುವ ತೀವ್ರ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದರಿಂದ ಹಾಲನ್ನು ಅಗತ್ಯವಿರುವಂತೆ ಅಚ್ಚು ಮಾಡಲು ಮತ್ತು ಆಕಾರವನ್ನು ಪಡೆಯಲು ಸುಲಭವಾಗುತ್ತದೆ. ನಂತರ ಇದನ್ನು ಎದೆ ಹಾಲಿನ ನೆಕ್ಸಸ್, ಉಂಗುರ, ಕಿವಿಯೋಲೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು.

Leave A Reply

Your email address will not be published.