ಈ  ಔಷಧಿಗಳ ‘ಬೆಲೆ ” ಘಾಟು ಹೆಚ್ಚಳ ; ಕಹಿಯಾದ ಜನಸಾಮಾನ್ಯರ ಸ್ಥಿತಿ

ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ.

ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ.

ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ NLEM ನಲ್ಲಿ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ 10.7 ರಷ್ಟು ಏರಿಕೆಯಾಗುತ್ತವೆ.

NLEM ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಅಗತ್ಯ ಔಷಧಗಳನ್ನು ಒಳಗೊಂಡಿದೆ.

Leave A Reply

Your email address will not be published.