ಪೆರೋಲ್ ಖೈದಿ ನಾಪತ್ತೆಯಾದರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿ: ಸಚಿವ ಅರಗ ಜ್ಞಾನೇಂದ್ರ

ರಾಜ್ಯದಲ್ಲಿ ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿ ಮಾಡಲಾಗುತ್ತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಪರಿಷತ್ ನಲ್ಲಿ ಅಂಗೀಕರಿಸಿದ್ದಾರೆ.

ಈ ಕುರಿತು ಮಾತನಾಡಿದ ಜ್ಞಾನೇಂದ್ರ ಅವರು, ಈ ವಿಧೇಯಕವನ್ನು ಪೆರೋಲ್ ಪಡೆದ ವ್ಯಕ್ತಿಗೆ ಜಾಮೀನು ನೀಡುವ ವ್ಯಕ್ತಿ ಜವಾಬ್ದಾರಿ ಹೊಂದಿರಬೇಕು ಎಂಬ ಕಾರಣದಿಂದಾಗಿ ತರಲಾಗಿದೆ.

ಈ ತಿದ್ದು ಪಡಿಯಿಂದಾಗಿ ನ್ಯಾಯಯುತವಾಗಿ ಜಾಮೀನು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಾಮೀನು ನೀಡುವುದನ್ನೇ ದಂಧೆ ಮಾಡಿಕೊಂಡವರಿಗೆ, ಆ ಕೆಲಸ ಮಾಡಬಾರದು ಎಂಬ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿದೆ.

ಇಲ್ಲಿಯವರೆಗೆ 15 ಖೈದಿಗಳು ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಕರ್ನಾಟಕ ಬಂಧೀಖಾನೆಗಳ ತಿದ್ದುಪಡಿ ವಿಧೇಯಕದ ಅನುಸಾರವಾಗಿ, ಇನ್ಮುಂದೆ ಪೆರೋಲ್ ಕೈದಿ ನಾಪತ್ತೆಯಾದ್ರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.

Leave A Reply

Your email address will not be published.